29.9 C
Udupi
Tuesday, February 10, 2026
spot_img
spot_img
HomeBlogಕಾರ್ಕಳ ಬಸ್‌ ಸ್ಟ್ಯಾಂಡ್‌ನಿಂದ ಏಕಮುಖವಾಗಿ ಮಾರ್ಕೆಟ್ ರಸ್ತೆಯಾಗಿ LIC ಪೆರ್ವಾಜೆ , ಕಲ್ಲೊಟ್ಟೆ- ಬಂಡೀಮಠ ರಸ್ತೆ...

ಕಾರ್ಕಳ ಬಸ್‌ ಸ್ಟ್ಯಾಂಡ್‌ನಿಂದ ಏಕಮುಖವಾಗಿ ಮಾರ್ಕೆಟ್ ರಸ್ತೆಯಾಗಿ LIC ಪೆರ್ವಾಜೆ , ಕಲ್ಲೊಟ್ಟೆ- ಬಂಡೀಮಠ ರಸ್ತೆ ಸಂಪೂರ್ಣ ಕೆಟ್ಟು ಹೋಗಿರುವ ಮತ್ತು ನಾದುರಸ್ತಿಯ ಬಗ್ಗೆ ದೂರು

ಕಾರ್ಕಳ ಬಸ್‌ ಸ್ಟ್ಯಾಂಡ್‌ನಿಂದ ಏಕಮುಖವಾಗಿ ಮಾರ್ಕೆಟ್ ರಸ್ತೆಯಾಗಿ LIC ಪೆರ್ವಾಜೆ , ಕಲ್ಲೊಟ್ಟೆ- ಬಂಡೀಮಠ ರಸ್ತೆ ಸಂಪೂರ್ಣ ಕೆಟ್ಟು ಹೋಗಿರುವ ರಸ್ತೆಯನ್ನು ಅವಲಂಬಿತರಾಗಿ ಕಾರ್ಕಳ ಉಡುಪಿ ಮತ್ತು ಕಾರ್ಕಳದಿಂದ ಹೆಬ್ರಿ ಮಾರ್ಗಕ್ಕೆ ಸಂಚರಿಸುವ ಬಸ್ಸುಗಳು, ಕಾರುಗಳು, ಬಾಡಿಗೆಯನ್ನು ಅವಲಂಬಿಸಿರುವ ರಿಕ್ಷಾ ಚಾಲಕರು, ದ್ವಿ ಚಕ್ರ ವಾಹನಗಳು ಮತ್ತು ಘನ ವಾಹನಗಳು ಸಾವಿರಾರು ಸಂಖ್ಯೆಯಲ್ಲಿ ಈ ರಸ್ತೆಯನ್ನೇ ಅವಲಂಬಿತರಾಗಿರುವುದು ನಿಮಗೆ ತಿಳಿದಿರುವ ವಿಷಯ ಈಗ
ಸರಿಸುಮಾರು ಒಂದು ವರ್ಷದೀಚೆಗೆ ಜಲಜೀವನ್ -2, ಪೈಪು ಲೈನು ಹಾಕುವ ವೇಳೆ ಇದೇ ಕಾರ್ಕಳ
ನಗರ ಸಂಪರ್ಕಿಸುವ ಈ ಏಕಮುಖ ರಸ್ತೆಯು ಸಂಪೂರ್ಣ ಹಾಳಾಗಿ ನಡೆದುಕೊಂಡು ಹೋಗುವುದೇ
ಅಸಾಧ್ಯವಾಗಿರುತ್ತದೆ. ಹಾಗೂ ಶಾಲಾಮಕ್ಕಳ ಬಸ್ಸುಗಳು, ರಿಕ್ಷಾಗಳು, ಕಾರುಗಳು, ಸೈಕಲ್ ಸವಾರರಿಗೆ
ಈ ರಸ್ತೆಯಲ್ಲಿ ಸಾಗುವುದೇ ಸವಾಲಿನ ಕೆಲಸವಾಗಿರುತ್ತದೆ. ಮತ್ತು ಕಲ್ಲೊಟ್ಟೆ ಬ್ರಿಡ್ಜ್ (ಸೇತುವೆಯ) ಬಳಿ
ಬದಿಗೆ ಕಟ್ಟಲಾಗಿರುವ ಪಾದೆಕಲ್ಲುಗಳು ಕೂಡಾ ಪೈಪು ಅಳವಡಿಕೆಯ ಸಮಯದಲ್ಲಿ ತೆಗೆದು ಬೇಕಾಬಿಟ್ಟಿ
ಕೆಲಸ ಮಾಡಿರುವುದರಿಂದ ಪಾದಾಚಾರಿಗಳಿಗೆ ನಡೆದುಕೊಂಡು ಹೋಗಲು ಫುಟ್‌ ಪಾತ್ ಕೂಡಾ
ಇಲ್ಲದೇ ಸಂಪೂರ್ಣ ರಸ್ತೆಯು ಹೊಂಡ ಗುಂಡಿಗಳಿಂದ ಅವೃತವಾಗಿರುತ್ತದೆ. ಈ ಬಗ್ಗೆ
ಸಂಬಂಧಪಟ್ಟ ಪುರಸಭಾ ಅಧಿಕಾರಿಗಳಿಂದ ಖುದ್ದಾಗಿ ಸ್ಥಳ ಪರಿಶೀಲಿಸಿ ರಸ್ತೆ ಢಾಮಾರೀಕರಣ ಕೆಲಸ
ಕೈಗೊಂಡು ಪಾದಾಚಾರಿಗಳಿಗೆ ಹಾಗೂ ಎಲ್ಲಾ ವರ್ಗದ ವಾಹನಗಳನ್ನು ಕೊಂಡು ಹೋಗುವರೇ?
ಸುಗಮ ಸಂಚಾರಕ್ಕೆ ಯೋಗ್ಯ ರಸ್ತೆ ಮಾಡಿಕೊಡುವಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಬೇಕಾಗಿಯೂ
ತಪ್ಪಿದ ಪಕ್ಷ ನಾವೆಲ್ಲರೂ ಈ ಏಕಮುಖ ರಸ್ತೆಯ ಅವಲಂಬಿತ ನಾಗರೀಕರು, ಶಾಲಾ ಮಕ್ಕಳು,
ಹಿರಿಯ ನಾಗರೀಕರೆಲ್ಲರೂ ದಿನಾಂಕ: 12/02/2026 ಗುರುವಾರ ಶಾಂತ ರೀತಿಯಲ್ಲಿ ರಸ್ತೆ ತಡೆ ನಡೆಸಿ
ಪ್ರತಿಭಟನೆ ಮಾಡಲು ನಿರ್ಧರಿಸುತ್ತೇವೆ. ಈ ಬಗ್ಗೆ ಪುರಸಭೆಯಲ್ಲಿ ರಸ್ತೆ ಕಾಮಗಾರಿಯ ಕೆಲಸ
ನಡೆಸುವರೇ ಆರ್ಥಿಕ ಅಡಚನೆ ಇದ್ದಲ್ಲಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಆರ್ಥಿಕ
ಸಹಾಯದೊಂದಿಗೆ ಕಾಮಗಾರಿ ನಡೆಸುವುದು ಅನಿವಾರ್ಯವಾದರೆ ನಾವೆಲ್ಲರೂ ತಯಾರಿದ್ದೇವೆ. ಈ ಬಗ್ಗೆ ಪುರಸಭಾ ಮುಖ್ಯಾಧಿಕಾರಿಗಳಾದ ತಾವು ಶೀಘ್ರ ಖುದ್ದಾಗಿ ರಸ್ತೆಯನ್ನು ಪರಿಶೀಲಿಸಿ ಕಾಮಗಾರಿ
ಕೈಗೆತ್ತಿಕೊಳ್ಳುವಂತೆ ಸಾರ್ವಜನಿಕರಾದ ನಾವೆಲ್ಲರೂ ಮನವಿ ಮಾಡುತ್ತಿದ್ದೇವೆ. ಮತ್ತು ಏಕಮುಖ
ರಸ್ತೆಯಲ್ಲಿ ಸಂಚರಿಸುವ ಎಲ್ಲಾ ಬಸ್ಸುಗಳು ಬೆಳಿಗ್ಗೆಯಿಂದ ರಾತ್ರಿ ವರೆಗೂ ಸಂಚರಿಸುವ ಹಾಗೆ ಮಾಡತಕ್ಕದ್ದು. ಸಾರ್ವಜನಿಕರಿಗೆ ಬಸ್ಸಿನ ಉಪಯೋಗ ಸಿಗುವ ಹಾಗೆ ಪುರಸಭೆಯು
ಗಮನಹರಿಸುವಂತೆ ನಾಗರಿಕರು ಕೇಳಿಕೊಂಡರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page