
ಕಾರ್ಕಳ ಬಸ್ ಸ್ಟಾಂಡ್ ಪ್ರಯಾಣಿಕರ ತಂಗುದಾಣದಲ್ಲಿ ಕುಡಿಯಲು ನೀರಿನ ವ್ಯವಸ್ಥೆಗೆ ಕ್ಷೇತ್ರದ ಶಾಸಕರ ಅನುದಾನ, ಉದ್ಯಮಿಗಳಾದ ವಿಜಯ್ ಶೆಟ್ಟಿ, ರೋಟರಿ ಕ್ಲಬ್ ಕಾರ್ಕಳ ಅವರು ನೀಡಿದ ಕೋಲ್ಡ್, ಬಿಸಿ ನೀರಿನ ಎರಡು ಫ್ರಿಡ್ಜ್ ಗೆ ಸುಮಾರು ಎಂಟು ತಿಂಗಳುಗಳಿಂದ ಕಾರ್ಕಳ ಪುರಸಭೆಯಿಂದ ನೀರು ಸರಬರಾಜು ಆಗದೇ ಇರುವುದರಿಂದ ಬಸ್ಸು ಏಜೇಂಟರ ಬಳಗ, ಸ್ಥಳೀಯ ಜನಪ್ರತಿನಿದಿ,ಇಂಜಿನಿಯರ್ ಬಳಿ ಮನವಿ ಮಾಡಿದರೂ ಏನು ಪ್ರಯೋಜನ ವಾಗಿರುವುದಿಲ್ಲ.
ಸಾರ್ವಜನಿಕರು, ಪ್ರಯಾಣಿಕರು ದಣಿವಾರಿಸಲು ಬಂದು ಫ್ರಿಡ್ಜ್ ಒತ್ತಿದಾಗ ನೀರು ಬಾರದೆ ಇದ್ದಾಗ ನೋಡುವವರ ಮನಸ್ಸು ಕರಗುವಂತಾಗುತಿತ್ತು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ, ಪುರಸಭೆಯ ಮಾಜಿ ಸದಸ್ಯರಾದ ಪ್ರಕಾಶ್ ರಾವ್ ರವರಲ್ಲಿ ವಿಷಯವನ್ನು ಪ್ರಾಸ್ತಾವಿಸಿದಾಗ ತಕ್ಷಣ ಕಾರ್ಯ ಪ್ರವೃತ್ತರಾದ ಅವರ ಮೂರು ದಿನಗಳ ಸತತ ಪ್ರಯತ್ನದ ಫಲವಾಗಿ ಎರಡು ಫ್ರಿಡ್ಜ್ ಗಳಲ್ಲಿ ದೀಪಾವಳಿಯ ವಿಶೇಷ ಕೊಡುಗೆ ಎಂಬಂತೆ ನೀರುಬರಲು ಪ್ರಾರಂಭವಾಯಿತು.
ಬಿಸಿಗೊಂಡಾಗ ಮಾತ್ರ ಬೆಣ್ಣೆ ಕರಾಗುವುದು ಎಂಬ ಗಾದೆ ಇಲ್ಲಿ ನೆನಪಿಸಿಕೊಳ್ಳುವಂತಾಯಿತು.



















































