
ಕಾರ್ಕಳ ಬಜಗೋಳಿಯಲ್ಲಿರುವ ಅನಿಮಲ್ ಕೇರ್ ಟ್ರಸ್ಟಿನಲ್ಲಿ ಗೋ ಕಳ್ಳತನ ನಡೆದಿರುವುದು ಅತ್ಯಂತ ಖಂಡನೀಯ…
ಕಾರ್ಕಳದಲ್ಲಿ ಈ ರೀತಿಯ ಕೃತ್ಯ ನಡೆಸುತ್ತಿರುವ ತಂಡಗಳು ಸಕ್ರಿಯವಾಗಿದ್ದು ಇದರ ಬಗ್ಗೆ ಪೊಲೀಸ್ ಇಲಾಖೆ ತಂಡಗಳನ್ನು ರಚಿಸಿ ಸೂಕ್ತ ಕ್ರಮವನ್ನು ಕೈ ಗೊಳ್ಳಬೇಕು. ಬೇರೆ ಬೇರೆ ಕಡೆಯಲ್ಲಿ ಈ ರೀತಿ ಘಟನೆಗಳು ನಡೆಯುತ್ತಿತ್ತು ಆದರೆ ಈ ಬಾರಿ ಕಾರ್ಕಳದಲ್ಲಿ ನಡೆದಿರುವುದು ಹಿಂದೂ ಸಮಾಜಕ್ಕೆ ಘಾಸಿ ಉಂಟು ಮಾಡಿದೆ..
ಗೋ ರಕ್ಷಣೆಗಾಗಿ ಗ್ರಾಮ ಗ್ರಾಮಗಳಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಮುಖಾಂತರ ಹಲವು ತಂಡಗಳನ್ನು ರಚಿಸಲಾಗುವುದು ಎಂದು ಕರ್ನಾಟಕ ದಕ್ಷಿಣ ಪ್ರಾಂತ ಗೋ ರಕ್ಷಾ ಪ್ರಮುಖರಾದ ಸುನಿಲ್ ಕೆ ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ









