ಸಂತಾಪ ಸೂಚಿಸಿದ, ಸಂಚಾಲಕರಾದ ವಿಜಯ ಶೆಟ್ಟಿ

ಯುವ ಉದ್ಯಮಿ ಕಾರ್ಕಳ ಬಂಟರ ಸಂಘದ ಸದಸ್ಯ ಹಾಗೂ ಹಲವುಸಂಘ ಸಂಸ್ಥೆ ಮತ್ತು ಸಾಮಾಜಿಕ ಕಾರ್ಯದಲ್ಲಿ ಸಕ್ರಿಯರಾಗಿದ್ದ ಮತ್ತು ಬೈಲೂರು ಮಾರಿಯಮ್ಮ ದೇವಸ್ಥಾನದ ಸಂಚಾಲಕರಾದ ನನ್ನ ಆತ್ಮೀಯ ಮಿತ್ರ ಶ್ರೀ ಕೃಷ್ಣರಾಜ ಹೆಗ್ಡೆ (ತಮ್ಮಣ್ಣ) ನಿಧನರಾಗಿರುವುದು ಅತ್ಯಂತ ದುಃಖ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ.
ಅವರ ಆತ್ಮದ ಸದ್ಗತಿಗಾಗಿ ಮತ್ತು ಕುಟುಂಬ ವರ್ಗ ಹಾಗೂ ಬಂಧು ಮಿತ್ರರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕಾರ್ಕಳ ಹೆಬ್ರಿ ಬಂಟರ ಸಂಘದ ಸಂಚಾಲಕರಾದ ವಿಜಯ್ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.



















