25.1 C
Udupi
Thursday, October 30, 2025
spot_img
spot_img
HomeBlogಕಾರ್ಕಳ ದೇವಳದಲ್ಲಿ ಭಜನ್ ಸಂಧ್ಯಾ ಕಾರ್ಯಕ್ರಮ

ಕಾರ್ಕಳ ದೇವಳದಲ್ಲಿ ಭಜನ್ ಸಂಧ್ಯಾ ಕಾರ್ಯಕ್ರಮ

ಪಡುತಿರುಪತಿ ಕೀರ್ತಿಯ ಕಾರ್ಕಳ ಶ್ರೀ ವೆಂಕಟರಮಣ ದೇವಳದಲ್ಲಿ ವೆಂಕಟರಮಣ ಭಜನಾ ಮಂಡಳಿಯ ಸಹಯೋಗದಲ್ಲಿ ಭಜನ್ ಸಂಧ್ಯಾ ಕಾರ್ಯಕ್ರಮವು ಈ ಸೋಮವಾರ ಸಂಜೆ ನಡೆಯಿತು. ಮಂಗಳೂರಿನ ಖ್ಯಾತ ಯುವ ಸಂಗೀತ ಕಲಾವಿದರಾದ ಗುರುದಾಸ್ ಚೂರ್ಯ ಅವರು ಈ ಭಕ್ತಿ ಸಂಗೀತದ ವಿಶೇಷವಾದ ಕಾರ್ಯಕ್ರಮವನ್ನು ಅತ್ಯಂತ ಸುಂದರವಾಗಿ ನಡೆಸಿಕೊಟ್ಟರು. ಕಾಶಿ ಮಠಾಧೀಶರಾದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ನಡೆದ ಈ ಕಾರ್ಯಕ್ರಮವನ್ನು ದೇವಳದ ಪುರಾಣಿಕರಾದ ರವೀಂದ್ರ ಪುರಾಣಿಕ್, ದೇವಳದ ಪ್ರಥಮ ಮೊಕ್ತೇಸರರಾದ ಜಯರಾಮ್ ಪ್ರಭು ಮತ್ತು ಡಾಕ್ಟರ್ ಮಂಜುನಾಥ್ ಕಿಣಿ ಅವರು ಜೊತೆಯಾಗಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಸುಮಾರು ಎರಡು ಘಂಟೆಗಳ ಕಾಲ ನಡೆದ ಈ ಭಕ್ತಿ ಸಂಗೀತದ ಕಾರ್ಯಕ್ರಮದಲ್ಲಿ ಹಿನ್ನೆಲೆ ಕಲಾವಿದರಾಗಿ
ಹಾರ್ಮೋನಿಯಂನಲ್ಲಿ ಮಣೆಲ್ ನಾಗೇಶ್ ಶೆಣೈ, ತಬ್ಲಾದಲ್ಲಿ ದತ್ತ ಪ್ರಭು, ಪಕ್ವಾಜನಲ್ಲಿ ಉಪೇಂದ್ರ ಮಲ್ಯಾ, ಕೊಳಲಿನಲ್ಲಿ ಉಡುಪಿ ಚೇತನ್ ನಾಯಕ್, ತಾಳದಲ್ಲಿ ರಾಮನಾಥ್ ಕಿಣಿ ಅವರು ಸಹಕರಿದರು. ವೆಂಕಟರಮಣ ಭಜನಾ ಮಂಡಳಿಯ ಗೌರವ ಅಧ್ಯಕ್ಷರಾದ ಬೋಳ ಪ್ರಭಾಕರ್ ಕಾಮತ್, ಈ ಕಾರ್ಯಕ್ರಮದ ಸೇವಾದಾರರಾದ ಪಾಲಡ್ಕ ನರಸಿಂಹ ಪೈ ಮತ್ತು ಆರ್ ಅನಂತಕೃಷ್ಣ ಶೆಣೈ ಅವರು ಕಲಾವಿದರನ್ನು ಗೌರವಿಸಿದರು. ನೂರಾರು ಭಕ್ತಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಶಿಕ್ಷಕರಾದ ರಾಜೇಂದ್ರ ಭಟ್ ಕೆ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಪಾಲಡ್ಕ ಶೇಷಗಿರಿ ಪೈ ಅವರು ಸ್ವಾಗತಿಸಿದರು. ಶಿಕ್ಷಕರಾದ ಯೋಗೀಶ್ ಕಿಣಿ ಧನ್ಯವಾದ ನೀಡಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page