
ಕಾರ್ಕಳ ತಾಲೂಕು ಯುವ ಬ್ರಾಹ್ಮಣ ಪರಿಷತ್ ಕಾರ್ಕಳ ಇದರ ವತಿಯಿಂದ ದಿನಾಂಕ 17.08.2025 ನೇ ಭಾನುವಾರ ಸಾಯಂಕಾಲ ಕಾರ್ಕಳ ಶ್ರೀ ಸೂರ್ಯನಾರಾಯಣ ಮಠದಲ್ಲಿ ನಡೆದಂತಹ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳಾದ ಕೃಷ್ಣ ವೇಷ ಸ್ಪರ್ಧೆ, ಭಕ್ತಿಗೀತೆ, ರಸಪ್ರಶ್ನೆ ಹಾಗೂ ಮೊಸರು ಕುಡಿಕೆ ಕಾರ್ಯಕ್ರಮಗಳು ಬಹಳ ಅದ್ದೂರಿಯಿಂದ ಸಮಾಜದ ಹಿರಿಯರ, ಗಣ್ಯರ ಮತ್ತು ಸಮಾಜ ಬಾಂಧವರ ಪಾಲ್ಗೊಳ್ಳುವಿಕೆಯಿಂದ ನೆರವೇರಿತು.
ಕಾರ್ಕಳ ತಾಲ್ಲೂಕು ಯುವ ಬ್ರಾಹ್ಮಣ ಪರಿಷತ್ ಇದರ ಅಧ್ಯಕ್ಷರಾದಂತಹ ರಾಮಚಂದ್ರ ಭಟ್ ಇವರ ಅಧ್ಯಕ್ಷತೆಯಲ್ಲಿ , ಮುಖ್ಯ ಅತಿಥಿಗಳಾಗಿ ಕಾರ್ಕಳ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ನಾರಾಯಣ ಭಟ್ ಇರ್ವತ್ತೂರು, ಹಿರಿಯರಾದ ಜನಾರ್ಧನ ರಾವ್ ಇಡ್ಯ, ಎನ್ ಪಿ ನ್ಯೂಸ್ ನ ಮಾಲೀಕರಾದಂತಹ ವಾಸುದೇವ ಭಟ್ ನೆಕ್ಕರಪಲ್ಕೆ, ಕಲ್ಲಮಠ ಸುರೇಶ್ ಉಪಾಧ್ಯಾಯ ಹಾಗೂ ಬಹುಮಾನದ ಪ್ರಾಯೋಜಕರಾದಂತಹ ಶ್ರೀಪತಿ ಬಾಯರ್ ಆಭರಣ ಜ್ಯುವೆಲ್ಲರ್ಸ್ ಕಾರ್ಕಳ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅನೇಕ ಪುಟಾಣಿ ಮುದ್ದು ಮಕ್ಕಳು ಮುದ್ದು ಕೃಷ್ಣ ಹಾಗೂ ಮುದ್ದು ರಾಧೆಯ ವೇಷ ಹಾಕಿ ರಂಜಿಸಿದರು. ತದನಂತರ ನಡೆದ ಭಕ್ತಿ ಗೀತೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲೂ ಕೂಡ ಅನೇಕ ಮಕ್ಕಳು ಮತ್ತು ಹಿರಿಯರು ಪಾಲ್ಗೊಂಡು ಕಾರ್ಯಕ್ರಮವನ್ನು ಚೆಂದಗಾಣಿಸಿಕೊಟ್ಟರು. ಕೃಷ್ಣವೇಷ ಸ್ಪರ್ಧೆ ಹಾಗೂ ಭಕ್ತಿ ಗೀತೆ ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀ ವೈ. ಅನಂತಪದ್ಮನಾಭ ಭಟ್, ಸವಿತಾ ನಾಗರಾಜ್ ಭಟ್, ಶ್ಯಾಮಲಾ ಕೆ.ಭಟ್ ಹಾಗೂ ಪವಿತ್ರಾ ಕೃಷ್ಣಪ್ರಸಾದ್ ಭಟ್ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಈ ಬಾರಿ ನಡೆದ ಎಸ್. ಎಸ್. ಎಲ್. ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 95 ಶೇಕಡಾಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ತದನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ರಜತ ನಾಣ್ಯ ಹಾಗೂ ನಗದು ರೂಪದಲ್ಲಿ ಬಹುಮಾನಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಪರಿಷತ್ತಿನ ಸದಸ್ಯರಾದ ಶ್ರೀ ಕೃಷ್ಣಮೂರ್ತಿ ಭಟ್, ಗಾಯತ್ರಿ ಕೃಷ್ಣಮೂರ್ತಿ ಭಟ್,ಡಾ. ಶ್ರೀರಾಮ ಮುಗೆರಾಯ, ಡಾ . ಮಾನಸ ಮುಗೆರಾಯ, ಪಾವನ ರಾಮಚಂದ್ರ ಭಟ್, ಪ್ರಫುಲ್ಲ ಕೃಷ್ಣ ಭಟ್, ಮಾನಸ ಉಪಾಧ್ಯಾಯ, ಸಂದೀಪ ಕೇಕುಣ್ಣಾಯ ಹಾಗೂ ಮಂಜುನಾಥ ಉಪಾಧ್ಯಾಯ ಮುಂತಾದವರು ಸಹಕರಿಸಿದರು. ಹಾಗೂ ಸಮಾಜದ ಅನೇಕ ಹಿರಿಯ ಮತ್ತು ಕಿರಿಯ ಬಾಂಧವರೆಲ್ಲರೂ ಪಾಲ್ಗೊಂಡು ಸಂಭ್ರಮಿಸಿದರು. ಶಾರ್ವರಿ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಕಳ ತಾಲೂಕು ಯುವ ಬ್ರಾಹ್ಮಣ ಪರಿಷತ್ತಿನ ಕಾರ್ಯದರ್ಶಿ ರಮೇಶ್ ರಾವ್ ಬಿ ಸ್ವಾಗತಿಸಿ, ವಂದಿಸಿದರು. ಕೊನೆಯಲ್ಲಿ ನೆರೆದ ಎಲ್ಲಾ ವಿಪ್ರ ಬಾಂಧವರಿಗೆ ವಿಶೇಷ ಔತಣಕೂಟವನ್ನು ಏರ್ಪಡಿಸಲಾಗಿತ್ತು.