
ಕಾರ್ಕಳ ತಾಲೂಕು ಮಹಿಳಾ ಸಂಘ ಕಾರ್ಕಳ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಇಂದು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ರೀಡಾ ಸಾಧನೆ ಮಾಡಿದ ಹೇಮಲತಾ ಸುಧಾಕರ್ ಶೆಟ್ಟಿ ಇವರಿಗೆ ಸನ್ಮಾನಿಸಲಾಯಿತು. ಮತ್ತು ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಹಾಗೂ ಮಹಿಳಾ ದಿನಾಚರಣೆಯ ಬಗ್ಗೆ, ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಪೂರ್ಣಿಮಾ.ಎನ್ ಹೆಗ್ಡೆ ಕುಂಟಾಡಿ, ಕಾರ್ಯದರ್ಶಿ ಜಯಂತಿ.ಎಸ್ ಶೆಟ್ಟಿ ಕುಕ್ಕುಂದೂರು, ಕೋಶಾಧಿಕಾರಿ ಶುಭ ವಿ.ಕಡಂಬ ,ಮಾಜಿ ಅಧ್ಯಕ್ಷೆ ಸವಿತಾ ವಿಜಯಕುಮಾರ್ ಶೆಟ್ಟಿ, ಮಾಜಿ ಕಾರ್ಯದರ್ಶಿ ಸುನಿತಾ ಶೆಟ್ಟಿ, ಜಯಲಕ್ಷ್ಮಿ ಶೆಟ್ಟಿ,, ಸುಜಾತ ಭಂಡಾರಿ, ಸ್ಥಾಪಕ ಪ್ರಧಾನ ಕಾರ್ಯದರ್ಶಿ ಬೇಬಿ.ಡಿ ಆಳ್ವ ಕಾರ್ಯಕ್ರಮ ನಿರೂಪಿಸಿದರು ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.




















