ಕ್ಷುಲ್ಲಕ ಕಾರಣಕ್ಕೆ ಕತ್ತು ಹಿಸುಕಿ ಕೊಲೆ

ಕಾರ್ಕಳ: ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿ ಎಂಬಲ್ಲಿ ತಾಯಿಯೊಬ್ಬಳು ಮಗಳನ್ನೇ ಹತ್ಯೆಗೈದಿರುವ ಅಮಾನವೀಯ ಘಟನೆ ನಡೆದಿದೆ.
17 ವರ್ಷದ ಶಿಫನಾಜ್ ಎಂಬ ಯುವತಿಯು ಕೊಲೆಯಾಗಿದ್ದು ಈಕೆ ಸಪ್ಟೆಂಬರ್ 20ರಂದು ತನ್ನ ಸ್ನೇಹಿತನನ್ನು ಭೇಟಿಯಾಗಲು ಉಡುಪಿಗೆ ಹೋಗಿ ಬರುವುದಾಗಿ ತಾಯಿಗೆ ತಿಳಿಸಿದ್ದು ಇದಕ್ಕೆ ತಾಯಿ ಗುಲ್ಝಾರ್ ಬಾನು(45) ನಿರಾಕರಿಸಿದ್ದಾಳೆ. ಈ ವೇಳೆ ತಾಯಿ ಮತ್ತು ಮಗಳ ಮಧ್ಯೆ ಜಗಳ ಆರಂಭವಾಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಈ ಕುರಿತು ಶಿಫನಾಜ್ ತಂದೆ ಶೇಖ್ ಮುಸ್ತಾಫ್ ಸೆಪ್ಟೆಂಬರ್ 20ರಂದು ಶಿಫನಾಜ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರ್ಕಳ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು. ಶಿಫನಾಜ್ ಆಕೆಯ ಸ್ನೇಹಿತ ಮಹಮ್ಮದ್ ಸಲೀಂ ನನ್ನು ಭೇಟಿಯಾಗಲು ಹೋಗುವುದಾಗಿ ತಾಯಿಯ ಬಳಿ ಹೇಳಿದ್ದು ಇದೇ ವಿಚಾರಕ್ಕೆ ತಾಯಿ ಮಗಳ ಮಧ್ಯೆ ಜಗಳ ಆರಂಭವಾಗಿ ಇದರಿಂದ ಕೋಪಗೊಂಡ ಶಿಫಾನಾಜ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದರು.
ಆದರೆ ಪೋಸ್ಟ್ ಮಾರ್ಟಂ ವರದಿಯಲ್ಲಿ ಶಿಫನಾಜ್ ಸಾವು ಆತ್ಮಹತ್ಯೆಯಲ್ಲ. ಉಸಿರುಗಟ್ಟಿಸಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ವರದಿ ಬಂದಿತ್ತು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಗುಲ್ಝಾರ್ ಬಾನು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ವೇಳೆ ತಾನು ಕುತ್ತಿಗೆ ಬಿಗಿ ಹಿಡಿದು ಕೊಲೆ ಮಾಡಿರುವ ವಿಚಾರ ಒಪ್ಪಿಕೊಂಡಿದ್ದಾರೆ. ಹೀಗಾಗಿ ಪೊಲೀಸರು ಅ.2ರಂದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.



















