21.1 C
Udupi
Tuesday, January 28, 2025
spot_img
spot_img
HomeBlogಕಾರ್ಕಳ ಜ್ಞಾನಸುಧ ಪ.ಪೂ: ವಾರ್ಷಿಕ ಕ್ರೀಡಾಕೂಟ

ಕಾರ್ಕಳ ಜ್ಞಾನಸುಧ ಪ.ಪೂ: ವಾರ್ಷಿಕ ಕ್ರೀಡಾಕೂಟ

ಅಡೆತಡೆಗಳನ್ನು ಸಾಧನೆಯ ಏಣಿಯಾಗಿಸಿಕೊಳ್ಳಿ: ರಮೇಶ್. ಎಚ್

ಎಷ್ಟೇ ಎತ್ತರದ ಸಾಧನೆ ಮಾಡಿದರು ಬೀಗದೆ, ಬಾಗುವ ಗುಣ ಮೈಗೂಡಿಸಿಕೊಳ್ಳಿ: ದಿನೇಶ್ ಎಂ ಕೊಡವೂರು


ಕಾರ್ಕಳ : ವಿದ್ಯಾರ್ಥಿಯ ಸಾಧನೆಯ ಹಿಂದೆ ಗುರುಗಳ ಪಾತ್ರ ಮಹತ್ವದ್ದು. ಅಂತಹ ಗುರುಗಳನ್ನು ಯಾವುದೇ ಕ್ಷೇತ್ರದಲ್ಲಿ ಮುನ್ನುಗ್ಗುವವರು ಆರಿಸಿಕೊಳ್ಳ ಬೇಕು. ಅಡೆತಡೆಗಳನ್ನು ಸಾಧನೆಯ ಏಣಿಯಾಗಿಸಿಕೊಂಡವರು ಸಾಧಕರಾಗಿ ಹೊರಬರುತ್ತಾರೆ ಎಂದು ಉಜಿರೆಯ ಎಸ್.ಡಿ.ಎಂ.
ಕಾಲೇಜಿನ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ, ದೈ.ಶಿ.ವಿಭಾಗದ ಮುಖ್ಯಸ್ಥ ಶ್ರೀ ರಮೇಶ್ ಎಚ್ ಹೇಳಿದರು.


ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ
ಕಾಲೇಜಿನಲ್ಲಿ ಜರುಗಿದ ವಾರ್ಷಿಕ ಕ್ರೀಡಾಕೂಟ-2024ರ
ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಸಿ
ಮಾತನಾಡಿದರು. ಶೈಕ್ಷಣಿಕ ಕ್ಷೇತ್ರ
ಮಾತ್ರವಲ್ಲದೆ ಸಾಂಸ್ಕೃತಿಕವಾಗಿ, ಹಾಗೂ
ಕ್ರೀಡೆಯನ್ನು ಉತ್ತೇಜಿಸುತ್ತಿರುವ ಇಲ್ಲಿನ
ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯ,
ಇಲ್ಲಿನ ಕ್ರೀಡಾಂಗಣವು ರಾಜ್ಯ ಹಾಗೂ ರಾಷ್ಟಿçÃಯ
ಕ್ರೀಡಾಕೂಟ ನಡೆಸುವುದಕ್ಕೂ
ಸುಯೋಗ್ಯವಾಗಿದೆ ಎಂದು ಕೊಂಡಾಡಿದರು.
ಕ್ರೀಡಾಕೂಟವನ್ನು ಉದ್ಘಾಟಿಸಿದ ಕಾಮನ್ ವೆಲ್ತ್
ವೈಟ್ ಲಿಫ್ಟಿಂಗ್ ಪದಕ ವಿಜೇತ ಹಾಗೂ ಏಕಲವ್ಯ
ಪ್ರಶಸ್ತಿ ಪುರಸ್ಕೃತ ಅಂತರಾಷ್ಟ್ರೀಯ
ಕ್ರೀಡಾಪಟು ಗುರುರಾಜ್ ಪೂಜಾರಿ ಮಾತನಾಡಿ,
ಕ್ರೀಡೆಯಲ್ಲಿ ತೊಡಗಿಕೊಂಡವರಿಗೆ ಇಂದು
ಸರಕಾರದ ವಿವಿಧ ಸ್ತರಗಳಲ್ಲಿ
ಉದ್ಯೋಗವನ್ನು ಪಡೆಯುವುದಕ್ಕೆ ಸಾದ್ಯವಿದೆ.
ಅದರ ಸದುಪಯೋಗ ಪಡಿಸಿಕೊಳ್ಳುವಂತೆ
ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಕಾರ್ಕಳ ಜ್ಞಾನಸುಧಾದ ಮುಖ್ಯ
ಕಾರ್ಯನಿರ್ಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್
ಎಂ.ಕೊಡವೂರ್ ವಹಿಸಿ ಸೋತವರನ್ನು ಹಾಗೂ
ಗೆದ್ದವರನ್ನು ನಾವು ಹೇಗೆ ಗುರುತಿಸುತ್ತೇವೆ
ಮತ್ತು ಗೌರವಿಸುತ್ತೇವೆ ಎಂಬುದರ ಮೇಲೆ
ನಮ್ಮ ವ್ಯಕ್ತಿತ್ವವು ಪ್ರತಿಫಲಿತವಾಗುತ್ತದೆ.
ನಾವು ಎಷ್ಟೇ ಎತ್ತರದ ಸಾಧನೆ ಮಾಡಿದರು
ಬೀಗದೆ ಬಾಗುವ ಗುಣ ಮೈಗೂಡಿಸಿಕೊಂಡಾಗಲೇ
ಸಾಧನೆಗೆ ಆರ್ಥಬರಲು ಸಾಧ್ಯವೆಂದರು.


ಗೌರವ ಸನ್ಮಾನ :
ಇದೇ ಸಂದರ್ಭ ಅಜೆಕಾರ್ ಪದ್ಮಗೋಪಾಲ್
ಎಜ್ಯುಕೇಶನ್ ಟ್ರಸ್ಟ್ ಹಾಗೂ ಜ್ಞಾನಸುಧಾ ಶಿಕ್ಷಣ
ಸಂಸ್ಥೆಯ ವತಿಯಿಂದ ಕಾಮನ್ ವೆಲ್ತ್ ವೈಟ್ ಲಿಫ್ಟಿಂಗ್
ಪದಕ ವಿಜೇತ ಹಾಗೂ ಏಕಲವ್ಯ ಪ್ರಶಸ್ತಿ
ಪುರಸ್ಕೃತ ಅಂತರಾಷ್ಟ್ರೀಯ ಕ್ರೀಡಾಪಟು
ಗುರುರಾಜ್ ಪೂಜಾರಿ ಹಾಗೂ ಅವರ
ಗುರುಗಳಾದ ಉಜಿರೆಯ ಎಸ್.ಡಿ.ಎಂ. ಕಾಲೇಜಿನ
ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ, ದೈ.ಶಿ.ವಿಭಾಗದ
ಮುಖ್ಯಸ್ಥ ಶ್ರೀ ರಮೇಶ್ ಎಚ್ ರವರನ್ನು
ಗೌರವಿಸಲಾಯಿತು.
ವೇದಿಕೆಯಲ್ಲಿ ಪಿ.ಆರ್.ಒ ಜ್ಯೋತಿ ಪದ್ಮನಾಭ
ಭಂಡಿ, ಹಿತೈಷಿಗಳಾದ ತ್ರಿವಿಕ್ರಮ ಕಿಣಿ ಹಾಗೂ
ದೇವೇಂದ್ರ ನಾಯಕ್ ಹಾಗೂ
ಉಪಪ್ರಾಂಶುಪಾಲರಾದ ಸಾಹಿತ್ಯ ಮತ್ತು ಶ್ರೀಮತಿ ಉಷಾ ರಾವ್ ಯು, ಪಿ.ಆರ್.ಒ ಜ್ಯೋತಿ
ಪದ್ಮನಾಭ್ ಭಂಡಿ, ಶೈಕ್ಷಣಿಕ ವ್ಯವಹಾರಗಳ ಡೀನ್
ಡಾ,ಮಿಥುನ್ ಯು, ವಿದ್ಯಾರ್ಥಿ ವ್ಯವಹಾರಗಳ ಡೀನ್
ಶಕುಂತಲಾ ಎಂ.ಸುವರ್ಣ, ಜ್ಞಾನಸುಧಾ ಎಂಟ್ರೆನ್ಸ್
ಅಕಾಡೆಮಿಯ ಮುಖ್ಯಸ್ಥ ಸಂದೀಪ, ದೈಹಿಕ ಶಿಕ್ಷಣ
ನಿರ್ದೇಕರುಗಳಾದ ಸೌಜನ್ಯ ಹೆಗ್ಡೆ, ಅರುಣ್
ಕುಮಾರ್, ಕಿರಣ್, ರೇಷ್ಮಾ ಸಾಲಿಸ್ ಉಪಸ್ಥಿತರಿದ್ದರು.
ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ
ಕುಲಾಲ್ ಕಾರ್ಯಕ್ರಮ ನಿರೂಪಿದರು. ಕು.ಮೌಲ್ಯ
ಎಚ್. ಪ್ರಾರ್ಥಿಸಿ, ದೈ.ಶಿ.ನಿರ್ದೇಶಕಿ ಸೌಜನ್ಯ ಹೆಗ್ಡೆ
ವಂದಿಸಿದರು. ಕು.ಹರ್ಷಿಕಾ ಪ್ರತಿಜ್ಞಾ ವಿಧಿ
ಬೋಧಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಿಂದ
ಆಕರ್ಷಕ ಪಥಸಂಚನ ನಡೆಯಿತು.
ಪಥಸಂಚಲನದ ವೀಕ್ಷಕ ವಿವರಣೆಯನ್ನು
ರಸಾಯನ ಶಾಸ್ತç ವಿಭಾಗದ ಮುಖ್ಯಸ್ಥ
ಡಾ.ಪ್ರಜ್ವಲ್ ಕುಲಾಲ್ ನೆರವೇರಿಸಿದರು.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page