ಸಾವಧಾನದ ಮನಸ್ಥಿತಿ ಗೌರವದ ಉಪಸ್ಥಿತಿ : ವಸಂತ್ ಆಚಾರ್

ಗಣಿತನಗರ : ಇಂದಿನ ಬದುಕು ಒತ್ತಡದಲ್ಲಿರಲು ಕಾರಣ
ಮನುಷ್ಯನಿಗೆ ತೃಪ್ತಿ ಇಲ್ಲದಿರುವುದೇ ಆಗಿದೆ. ನೆಮ್ಮದಿಯನ್ನು
ಕಳಕೊಂಡ ಮನುಜ ತಾಳ್ಮೆ, ಸಹನೆಯ ಮನೋಭಾವವನ್ನು
ಇಟ್ಟುಕೊಳ್ಳುವುದು ಮುಖ್ಯ. ವಿದ್ಯಾರ್ಥಿ ಜೀವನದಲ್ಲಿಯೇ
ಸಾವಧಾನದ ಮನಸ್ಥಿತಿಯನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ
ಗೌರವದ ಉಪಸ್ಥಿತಿಯನ್ನು ತನ್ನದಾಗಿಸಿಕೊಳ್ಳಲು ಸಾಧ್ಯ ಎಂದು ಪಳ್ಳಿ ಸ.ಪ.ಪೂ.ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಸಂತ ಆಚಾರ್ ನುಡಿದರು.
ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ಜ್ಞಾನಸುಧಾ ಒತ್ತಡರಹಿತವಾಗಿ ವಿದ್ಯಾರ್ಥಿಗಳ ಏಳಿಗೆಗೆ ತನ್ನ
ಯೋಜನಾ ಬದ್ಧವಾದ ಶೈಕ್ಷಣಿಕ ಚಟುವಟಿಕೆಯನ್ನು
ರೂಪಿಸಿಕೊಂಡು, ಮೌಲಿಕವಾದ ವಿಚಾರಧಾರೆಯನ್ನು ಪಸರಿಸುವ ಸಾಮಾಜಿಕ ಕಾರ್ಯಕ್ರಮಗಳ ಮುಖೇನ ಶೈಕ್ಷಣಿಕ
ಕ್ಷೇತ್ರದಲ್ಲಿ ನಾಡಿನಲ್ಲಿ ಮಾದರಿಯಾಗಿ ನಿಂತಿದೆ ಎಂದರು.
ನಿವೃತ್ತರಾದ ಬೋಳಾದ ರಾಮಕೃಷ್ಣ ಅನುದಾನಿಕ ಹಿರಿಯ
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ಕೆಮ್ಮಣ್ಣು,ಬೆಳ್ಮಣ್ಣುವಿನ ಸ.ಪ್ರೌ.ಶಾಲೆಯ ಮುಖ್ಯ ಶಿಕ್ಷಕಿ ಸುಶೀಲಾ ಎನ್,ಎರ್ಲಪ್ಪಾಡಿಯ ಅನಂತಮತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎನ್. ವಿಷ್ಣುಮೂರ್ತಿ ಭಟ್, ತೆಳ್ಳಾರಿನ ಸ.ಪ್ರೌ.ಶಾಲೆಯ ಶಿಕ್ಷಕಿ ಶ್ರೀಮತಿ ಅನುಪಮ ಚಿಪ್ಲೂಣಕರ್ ಹಾಗೂ ನಿಟ್ಟೆಯ ಎನ್.ಎಸ್.ಎ.ಎಂ ಆಂಗ್ಲಮಾಧ್ಯಮ ಪ್ರೌಢಶಾಲೆಯ ಶ್ರೀಮತಿ
ಗ್ರೆಟ್ಟಾ ಸಲ್ಡಾನ್ಹರವರನ್ನು ಅಜೆಕಾರ್ ಪದ್ಮಗೋಪಾಲ್
ಎಜ್ಯುಕೇಶನ್ ಟ್ರಸ್ಟ್ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಗೌರವಿಸಲಾಯಿತು.
ಗೌರವ ಸ್ವೀಕರಿಸಿದವರ ಪರವಾಗಿ ಬೋಳಾದ ರಾಮಕೃಷ್ಣ
ಅನುದಾನಿಕ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ಕೆಮ್ಮಣ್ಣು ಹಾಗೂ ತೆಳ್ಳಾರಿನ ಸ.ಪ್ರೌ.ಶಾಲೆಯ ಶಿಕ್ಷಕಿ ಶ್ರೀಮತಿ ಅನುಪಮ ಚಿಪ್ಲೂಣಕರ್ ಮಾತನಾಡಿದರು.
ಇದೇ ಸಂದರ್ಭ ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ
ಮುಖ್ಯ ಅಭ್ಯಾಗತರಾದ ವಸಂತ್ ಆಚಾರ್‌ರವರನ್ನು
ಸನ್ಮಾನಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಪ್ರಾಂಶುಪಾಲ ದಿನೇಶ್ ಎಂ. ಕೊಡವೂರ್, ಉಪಪ್ರಾಂಶುಪಾಲರಾದ ಸಾಹಿತ್ಯ,ಉಷಾರಾವ್ ಯು, ಸಂಸ್ಥೆಯ ಹಿತೈಶಿಯಾದ ದೇವೇಂದ್ರ ನಾಯಕ್ ಉಪಸ್ಥಿತರಿದ್ದರು.
ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ
ಉಪಪ್ರಾಂಶುಪಾಲ ಸಾಹಿತ್ಯ ಸ್ವಾಗತಿಸಿ, ರಸಾಯನಶಾಸ್ತç ವಿಭಾಗದ ಮುಖ್ಯಸ್ಥ ಡಾ. ಪ್ರಜ್ವಲ್ ಕುಲಾಲ್ ನಿರೂಪಿಸಿ ವಂದಿಸಿದರು.