
ಕಾರ್ಕಳ: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ರಾಧ ನಾಯಕ್ ಸರ್ಕಾರಿ ಪ್ರೌಢಶಾಲೆ ಎಣ್ಣೆಹೊಳೆ ಇಲ್ಲಿ ಆಯೋಜಿಸಿದ್ದ 14ರ ವಯೋಮಿತಿಯೊಳಗಿನ ಕಾರ್ಕಳ ವಲಯ ಮಟ್ಟದ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆ ಗಣಿತ ನಗರ ಇಲ್ಲಿಯ 8ನೇ ತರಗತಿಯ ವಿದ್ಯಾರ್ಥಿಗಳಾದ ಅದಿತಿ, ಹರ್ಡಲ್ಸ್ ಹಾಗೂ 4×100ಮೀಟರ್ ರಿಲೇ ಓಟದಲ್ಲಿ ಪ್ರಥಮ ಸ್ಥಾನ ಮತ್ತು 200 ಮೀಟರ್ ಓಟದಲ್ಲಿ
ತೃತೀಯ ಸ್ಥಾನ , ಕೃತಿಕ 4×100 ಮೀಟರ್ ರಿಲೇ ಓಟದಲ್ಲಿ ಪ್ರಥಮ ಸ್ಥಾನ ಮತ್ತು 100 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪ್ರತಿಕ್ಷ ಹಾಗೂ 7ನೇ ತರಗತಿಯ ವಿದ್ಯಾರ್ಥಿನಿ ಕಶ್ವಿ 4×100 ಮೀಟರ್ ರಿಲೇ ಓಟದಲ್ಲಿ ಪ್ರಥಮ ಸ್ಥಾನ, ಅನುಷಾ ಶಾಟ್ ಪುಟ್ ನಲ್ಲಿ ದ್ವಿತೀಯ ಸ್ಥಾನ, ಸಮೃದ್ ಭಟ್ ಡಿಸ್ಕಸ್ ತ್ರೋನಲ್ಲಿ ಪ್ರಥಮ ಸ್ಥಾನ, ಪ್ರತ್ಯುಷ್ ಬಿ. ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ
ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.



















































