Data Security Council of India ಮತ್ತು Kyndryl PVT Ltd ವತಿಯಿಂದ ದಿನಾAಕ 09-12-2024 ರಿಂದ 11-12-2024 ರವರೆಗೆ 3 ದಿನಗಳು Kyndryl PVT Ltd ಜಾಗೃತಿ ಕಾರ್ಯಗಾರವು ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗಣಿತನಗರದಲ್ಲಿ ನಡೆಯಿತು. DSCI ಸಂಸ್ಥೆ, ಡಿಜಿಟಲ್ ಪ್ರಪಂಚದಲ್ಲಿ ನಡೆಯುವ ಸೈಬರ್ ಅಪಾಯಗಳನ್ನು ತಡೆಯಲು ಮತ್ತು ನಿರ್ವಹಿಸಲು ಸಮರ್ಪಿತವಾದ ಸಂಸ್ಥೆ. ಇದು ದೇಶದ ನಿರ್ವಹಣಾ ಸಂಸ್ಥೆ, ಕಾರ್ಪೋರೇಟ್ ಸಂಸ್ಥೆಗಳು ಮತ್ತು ವೈಯುಕ್ತಿಕ ಡೇಟಾವನ್ನು ಸಂರಕ್ಷಿತವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುವ ಸಂಸ್ಥೆ.
ಈ ಕಾರ್ಯಕ್ರಮದಲ್ಲಿ ಡಿ. ಎಸ್. ಸಿ. ಐ ಸಂಸ್ಥೆಯ ನವ್ಯಾ ಪ್ರತಾಪ್ ಅಸಿಸ್ಟೆಂಟ್ ಮ್ಯಾನೇಜರ್ ಬ್ಯುಸಿನೆಸ್ ಡೆವಲಪ್‌ಮೆಂಟ್. ವೇದಿಕಾ ತೋಮಾರ್ ಪ್ರೋಜೆಕ್ಟ್ ಕೋ-ಒರ್‌ಡಿನೇಟರ್, ಶಶಿಧರ್ ಪಾಟ್ಗರ್
ಬ್ಯುಸಿನೆಸ್ ಎಕ್ಸಿಕ್ಯೂಟಿವ್ Cyber Sapiens ಇವರುಗಳು ಸೈಬರ್ ಅಪಾಯಗಳನ್ನು ಪತ್ತೆ ಹಚ್ಚುವುದು, ಸೈಬರ್ ದಾಳಿಗಳನ್ನು ತಡೆಯುವುದು, ಮಾಹಿತಿಗಳನ್ನು ಸಂರಕ್ಷಿಸುವುದು, ಸೈಬರ್ ಜಾಗೃತಿ, ಬಳಕೆದಾರನ ಗೌಪ್ಯತೆ, ವ್ಯಕ್ತಿಗತ ಮಾಹಿತಿಗಳ ಸೋರಿಕೆಯ ಅಪಾಯಗಳ ಬಗ್ಗೆ ಜಾಗೃತಿ ನೀಡಿರುತ್ತಾರೆ. poster ಮಾಡುವ ಸ್ಪರ್ಧೆಗಳನ್ನು ಏರ್ಪಡಿಸಿ ಅತ್ಯಾಕರ್ಷಕ ನಗದು ಬಹುಮಾನ ವಿತರಣೆ ಮಾಡಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಿ ಯಶಸ್ವಿ ಜಾಗೃತಿಕಾರ್ಯಕ್ರಮವನ್ನು ನೀಡಿರುತ್ತಾರೆ.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ದಿನೇಶ್ ಎಂ ಕೊಡವೂರು, ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ಉಪ ಪ್ರಾಂಶುಪಾಲೆಯಾದ ಶ್ರೀಮತಿ ವಾಣಿ ಕೆ, ಅಕಾಡೆಮಿಕ್ ಅಡ್ವೈಸರ್ ಶ್ರೀಮತಿ ಶಾರದಾ ಅಂಬರೀಷ್, ಆಂಗ್ಲ ಭಾಷಾ ಉಪನ್ಯಾಸಕಿಯಾದ ದಿವ್ಯಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.