
ಕಾರ್ಕಳ : ನಕ್ರೆ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರಾಥಮಿಕ ವಿಭಾಗದ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಾರ್ಕಳ ಜ್ಞಾನಸುಧಾ ಶಾಲೆ ಮತ್ತು ಪ್ರೌಢಶಾಲೆ ಗಣಿತ ನಗರದ 6ನೇ ತರಗತಿಯ ವಿದ್ಯಾರ್ಥಿಗಳಾದ ಅದಿತಿ ಭಕ್ತಿ ಗೀತೆಯಲ್ಲಿ, ಕವನ
ವಾಚನದಲ್ಲಿ ಅನ್ವಿ ಶೆಟ್ಟಿ, 7ನೇ ತರಗತಿಯ ವಿದ್ಯಾರ್ಥಿಗಳಾದ ತ್ರಿಷಾ ಜೆ. ಕೆ ಚಿತ್ರ ಕಲೆಯಲ್ಲಿ ,ಇಂಗ್ಲಿಷ್ ಕಂಠಪಾಠದಲ್ಲಿ ಸಾಕ್ಷಿ ತಂತ್ರಿ ,ಕ್ಲೇ ಮಾಡಲಿಂಗ್ ನಲ್ಲಿ ಖುಷಿ, ಪ್ರಬಂಧ-ಮತ್ತು ಆಶುಭಾಷಣ ಸಾತ್ವಿ ಕುಂದರ್ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಪ್ರೌಢ ವಿಭಾಗದಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳಾದ ತನ್ವಿ ಪ್ರಬಂಧದಲ್ಲಿ,ಜನಪದ ಗೀತೆಯಲ್ಲಿ ಆರಾಧ್ಯ ಆರ್.ಪಿ, ಚಿತ್ರಕಲೆಯಲ್ಲಿ ಶಾರ್ವಿ ಹೆಗ್ಡೆ ,ಭಾವಗೀತೆಯಲ್ಲಿ ವಿ .ತನುಜ್ಞಾ ,ಕವನ ವಾಚನದಲ್ಲಿ ವರ್ಣ ಭಟ್,ಸಂಸ್ಕೃತ ಭಾಷಣದಲ್ಲಿ ಸಮೃಧ್ಧ್ . ಎಸ್., 8ನೇ ತರಗತಿಯ ಫಿಯೊನಾ
ಇಂಗ್ಲಿಷ್ ಭಾಷಣದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
9ನೇ ತರಗತಿಯ ವಿದ್ಯಾರ್ಥಿಗಳಾದ ಮನ್ವಿತ್ ಕನ್ನಡ ಭಾಷಣದಲ್ಲಿ ದ್ವಿತೀಯ, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಧೀಮಹಿ ದ್ವಿತೀಯ, ಚರ್ಚಾ ಸ್ಪರ್ಧೆಯಲ್ಲಿ ದಯಾನಂದ ದ್ವಿತೀಯ, ಹಿಂದಿ ಭಾಷಣದಲ್ಲಿ ಇಶಾನ್ ವಾಝ್ ದ್ವಿತೀಯ, ರಸಪ್ರಶ್ನೆಯಲ್ಲಿ ಇಶಾನ್ ವಾಝ್ ಮತ್ತು ಪ್ರದ್ಯೋತ್ ಪ್ರಮಲ್ ತೃತೀಯ, 6ನೇ ತರಗತಿಯ ವಿದ್ಯಾರ್ಥಿಗಳಾದ ಸನ್ನಿಧಿ ಅಭಿನಯ ಗೀತೆಯಲ್ಲಿ ದ್ವಿತೀಯ, ಸನ್ನಿಧಿ ಭಟ್ ದೇಶಭಕ್ತಿ ಗೀತೆಯಲ್ಲಿ ತೃತೀಯ ಸ್ಥಾನ
ಪಡೆದಿರುತ್ತಾರೆ.
ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.





