ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು: ನವೀನ್ ಚಂದ್ರ ಶೆಟ್ಟಿ

ಕಾರ್ಕಳ :ಕಾರ್ಕಳ ಜ್ಞಾನಸುಧಾ ಗಣಿತನಗರದಲ್ಲಿ 2025-26ನೇ ಸಾಲಿನ ಇಂಟಾರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭವು ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಪದಗ್ರಹಣ ಮಾಡಿ ಮಾತನಾಡಿದ ಇವರು ವಿದ್ಯಾರ್ಥಿಗಳಾದ ತಾವು ಕಲಿಕೆಯೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಗುರು ಹಿರಿಯರಿಗೆ ಗೌರವ ಕೊಟ್ಟು, ಕಿರಿಯರಿಗೆ ಪ್ರೀತಿ ಕೊಟ್ಟು ಉತ್ತಮ ಪ್ರಜೆಯಾಗಿ ಬಾಳುವಂತಾಗಬೇಕೆಂದು ಎಂದು ತಿಳಿಸಿದರು .
ಸಮಾಜದಿಂದ ನಮಗೇನು ಸಿಗುತ್ತದೆ ಎಂಬುದು ಮುಖ್ಯವಲ್ಲ. ಸಮಾಜಕ್ಕಾಗಿ ನಾವೇನು ಕೊಡುತ್ತೇವೆ ಎಂಬುದು ಅತೀ ಮುಖ್ಯ ಎಂದು ಕಾರ್ಕಳ ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷರಾದ ಬಾಲಕೃಷ್ಣ ದೇವಾಡಿಗ ಹೇಳಿದರು.
ಸೇವೆಯೇ ದೊಡ್ಡದು ಎಂಬ ಧ್ಯೇಯ ವಾಕ್ಯವನ್ನು ತಿಳಿಸಿ ಕೊಟ್ಟಂತಹ ಮೋಹನ್ ಶೆಣೈ ಯವರು ರೋಟರಿ ಕ್ಲಬ್ ನ ಹುಟ್ಟು ಹಾಗೂ ಬೆಳವಣಿಗೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಕಳ ಜ್ಞಾನಸುಧಾದ ಸಾರ್ವಜನಿಕ ಸಂಪರ್ಕಧಿಕಾರಿಯಾಗಿರುವ ಜ್ಯೋತಿ ಪದ್ಮನಾಭ ಭಂಡಿಯವರು ಇಂಟಾರಾಕ್ಟ್ ಕ್ಲಬ್ ನ ಉದ್ದೇಶ ಮತ್ತು ಗುರಿಯನ್ನು ತಿಳಿಸುತ್ತಾ ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
2025-26ನೇ ಸಾಲಿನ ಇಂಟಾರಾಕ್ಟ್ ಕ್ಲಬ್ನ ನೂತನ ಅಧ್ಯಕ್ಷರಾಗಿ ವೈಭವ್ ಶೆಣೈ , ಕಾರ್ಯದರ್ಶಿಯಾಗಿ ಸಾನ್ವಿ ಎಸ್.ಆಯ್ಕೆಯಾದರು.
ಜ್ಞಾನಸುಧಾ ಶಾಲೆ ಮತ್ತು ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ವಾಣಿ ಕೆ. ಇಂಟರಾಕ್ಟ್ ಕ್ಲಬ್ ಸಂಯೋಜಕಿ ದಿವ್ಯಾ ರಾವ್, ರೋಟರಿ ಕ್ಲಬ್ ಸದಸ್ಯರಾದ ಅರುಣ್ ಶೆಟ್ಟಿ, ವಸಂತ. ಎಂ. ಉಪಸ್ಥಿತರಿದ್ದರು.
ವಿದ್ಯಾರ್ಥಿ ಮನೀಶ್ ಪ್ರಾರ್ಥಿಸಿದರು. ಕುಮಾರಿ ಶರಣ್ಯ ಕಾರ್ಯಕ್ರಮ ನಿರೂಪಿಸಿ, ಸಾನ್ವಿ ಧನ್ಯವಾದವಿತ್ತರು.