25 C
Udupi
Thursday, February 19, 2026
spot_img
spot_img
HomeBlogಕಾರ್ಕಳ ಜೇಸಿ ಶಾಲೆಯಲ್ಲಿ, "ವಂದೇ ಮಾತರಂ" ಶಾಸ್ತ್ರಿಯ ಕಲಿಕೆ

ಕಾರ್ಕಳ ಜೇಸಿ ಶಾಲೆಯಲ್ಲಿ, “ವಂದೇ ಮಾತರಂ” ಶಾಸ್ತ್ರಿಯ ಕಲಿಕೆ

ಕಾರ್ಕಳ ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸರಕಾರದ ಆದೇಶದಂತೆ ಪೂರ್ಣ ವಂದೇ ಮಾತರಂ ಗೀತೆಯ ಶಾಸ್ತ್ರ ಬದ್ಧ ಹಾಡಿಗೆ ತಯಾರಾಗುತ್ತಿದೆ.

ವಂದೇ ಮಾತರಂ ದೇಶದ ಪ್ರಜೆಗಳ ಭಾವನೆಗಳ ಪ್ರತೀಕವಾಗಿದ್ದು ಜನರಿಗೆ ಪ್ರೇರಣಾದಾಯಿಯಾಗಿ ಸ್ವಾತಂತ್ರ್ಯ ತರುವಲ್ಲಿ ಮಹತ್ತರ ಪಾತ್ರ ವಹಿಸಿತ್ತು. ಇದರ ಸರಿಯಾದ ಉದ್ಘೋಷ ಮಕ್ಕಳಲ್ಲಿ ದೇಶ ಪ್ರೇಮದ ಕಿಡಿಯನ್ನು ಉದ್ದೀಪನ ಗೊಳಿಸಲಿದೆ. ಈ ಕಾರಣದಿಂದ ಅದರ ಶಾಸ್ತ್ರಬದ್ಧ ಉದ್ಘೋಷದ ಕಲಿಕೆ ಖ್ಯಾತ ಸಂಗೀತ ಗುರು, ಭಜನೆ ಹಾಗೂ ಭಾವ ಗೀತೆಗಳ ಮೇರು ಯೋಗೀಶ್ ಕಿಣಿ ಯವರ ಮಾರ್ಗದರ್ಶನದಲ್ಲಿ ಇಂದು ಪ್ರಾರಂಭಗೊಂಡಿತು.

ಎಲ್ಲಾ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು ಈ ಕಲಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page