
ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ತಿಂಗಳ ಕಾರ್ಯಕ್ರಮವನ್ನು ಬೋರ್ಡ್ ಹೈಸ್ಕೂಲ್ ನಲ್ಲಿ ಹಮ್ಮಿಕೊಳ್ಳಲಾಯಿತು. ಶ್ಯಾಮಲಾ ಗೋಪಿನಾಥ್ ರವರು ಭೂತಾನ್ ಪ್ರವಾಸದ ಕುರಿತು ಮಾತನಾಡಿದರು.
ಭೂತಾನಿನ ಪರಿಶುದ್ಧ ಪರ್ಯಾವರಣ,ಪ್ರಾಕೃತಿಕ ಸೌಂದರ್ಯ,ಸಂಪ್ರದಾಯಗಳು,ಆಹಾರ ಪದ್ಧತಿ,ಸ್ವಚ್ಛತೆ,ಹಾಗೂ ಅಲ್ಲಿನ ವಿಶೇಷವಾದ ನೋಟಗಳ ಕುರಿತು ಸವಿವರವಾಗಿ ವರ್ಣಿಸಿದರು .ಅಲ್ಲಿನ ಜನರ ಜೀವನ ಪದ್ಧತಿ, ವಿಶೇಷತೆಗಳನ್ನು ಪರಿಚಯಿಸಿದರು. ಮಾಲತಿ ವಸಂತ ರಾಜ ಆಚರಣೆ ಮತ್ತು ವೈಜ್ಞಾನಿಕತೆ ಎನ್ನುವ ವಿಷಯದ ಕುರಿತು ಮಾತನಾಡಿದರು. ನಮ್ಮ ಪ್ರತಿಯೊಂದು ಆಚಾರ ವಿಚಾರಗಳಲ್ಲೂ ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳಿವೆ.ಇಂದು ಪಾಶ್ಚಿಮಾತ್ಯ ಜೀವನ ಶೈಲಿಯ ಅನುಕರಣೆ ಅಧಿಕವಾಗಿದೆ. ಸೌಂದರ್ಯ ವರ್ಧಕ ಹಾಗೂ ಆರೋಗ್ಯವರ್ಧಕ ಗಳೂ ಆಗಿರುವ ಕುಂಕುಮ,ಬಳೆ,ನತ್ತು, ಕಾಲುಂಗುರ,ಕಾಲ್ಗೆಜ್ಜೆ.ಇತ್ಯಾದಿಗಳನ್ನು ಧರಿಸಲು ಇಚ್ಛಾಶಕ್ತಿ ಬೇಕು.ನಮ್ಮ ಹಿರಿಯರು ಹೇಳಿದ,ಆಚರಿಸಿದ, ಪರಂಪರಾನುಗತವಾಗಿ ಬಂದಿರುವ ಸಂಸ್ಕಾರಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಉಳಿಸಿಕೊಂಡು ಹೋಗೋಣ ಎಂದರು
ಡಾ.ಸುಮತಿ .ಕೆ ಇವರ ಪ್ರಾರ್ಥನೆ ಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿ , ಸುಲೋಚನ ತಿಲಕ್ ಧನ್ಯವಾದ ನೀಡಿ, ಕಾರ್ಯದರ್ಶಿ ಡಾ.ಮಾಲತಿ ಜಿ.ಪೈ ನಿರೂಪಿಸಿದರು.