
ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ನಿವಾಸಿಯಾದ ಸ್ವತಿಕ್ ದೇವಾಡಿಗ ಎಲುಬಿನ ಟ್ಯೂಮರ್ ನಿಂದ ಬಳಲುತ್ತಿದ್ದು ಸದ್ಯ ದೇರಳಕಟ್ಟೆ ಕೆಎಸ್ ಹೆಗ್ಡೆ ಹಾಸ್ಪಿಟಲ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಶಸ್ತ್ರ ಚಿಕಿತ್ಸೆಗೆ 4ಲಕ್ಷ ವೆಚ್ಚ ವಾಗುತ್ತದೆ ಎಂದು ವೈದ್ಯರು ತಿಳಿಸಿರುತ್ತಾರೆ.
ತೀರಾ ಬಡ ಕುಟುಂಬ ಕ್ಕೆ ಇಷ್ಟು ದೊಡ್ಡ ಮೊತ್ತ ಹೊಂದಿಸಲು ಕಷ್ಟ ವನ್ನು ಅರಿತ ಕಾಂತಾವರ ಗೆಳಯರ ಬಳಗದ ಸರ್ವ ಸದಸ್ಯರು 1,16,850 ಮೊತ್ತದ ಚೆಕ್ಕನ್ನು ಸ್ವಾತಿಕ್ ದೇವಡಿಗರಿಗೆ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಮಹಾವೀರ ಪಾಂಡಿ,ಲಿಂಗಪ್ಪ ದೇವಾಡಿಗ,ಗೆಳಯರ ಬಳಗದ ಅಧ್ಯಕ್ಷರಾದ ಆಶಿಕ್ ಪೂಜಾರಿ, ಕಾರ್ಯದರ್ಶಿ ಪ್ರದೀಪ್ ಪೂಜಾರಿ ,ಹಾಗೂ ಗೆಳಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.



















































