ಮುಖ್ಯ ಅತಿಥಿಗಳಾಗಿ ,ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ ಉಪಸ್ಥಿತಿ

ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಸಲುವಾಗಿ ಇಂದು ಸಪ್ತಗಿರಿ ಕ್ಯಾಂಪಸ್ ಹಿರ್ಗಾನದಲ್ಲಿ ‘ಕ್ರಿಯೇಟಿವ್ ಅವಿರ್ಭವ್ 2025’ ವಿಜೃಂಭಣೆಯಿಂದ ನಡೆಯಲಿದೆ.
ಡಾ. ಎಚ್ ಎಸ್ ಬಲ್ಲಾಳ್, ವೀರಪ್ಪ ಮೊಯ್ಲಿ, ಎಚ್ ಡುಂಡಿರಾಜ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಬೆಳಿಗ್ಗೆ 10.30 ರಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಮಧ್ಯಾಹ್ನ 12:15 ರಿಂದ ಕನ್ನಡದ ಪ್ರಖ್ಯಾತ ಹಾಸ್ಯ ಕವಿ ಹಾಗೂ ನಾಟಕಕಾರರಾದ ಎಚ್ ಡುಂಡಿರಾಜ್ ಅವರಿಂದ ‘ಕ್ರಿಯೇಟಿವ್ ಸಾಹಿತ್ಯ-ಸಾಂಗತ್ಯ’ ಮಾತುಕತೆ ನಡೆಯಲಿದೆ. ಸಂಜೆ 6:15 ರಿಂದ ಕ್ರಿಯೇಟಿವ್ ವಿದ್ಯಾರ್ಥಿಗಳಿಂದ ‘ಸಿಂಧೂರ-ಸಂಭ್ರಮ’ ಎಂಬ ಪರಿಕಲ್ಪನೆಯೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ.



















