20.8 C
Udupi
Tuesday, December 23, 2025
spot_img
spot_img
HomeBlogಕಾರ್ಕಳ ಕಾಂಗ್ರೆಸ್‌ ನಿಂದ ಕೀಳು ಮಟ್ಟದ ರಾಜಕೀಯ- ದಿನೇಶ್‌ ಪೂಜಾರಿ ಬೋಳ ಗ್ರಾಮ ಪಂಚಾಯತ್‌ ಅಧ್ಯಕ್ಷ

ಕಾರ್ಕಳ ಕಾಂಗ್ರೆಸ್‌ ನಿಂದ ಕೀಳು ಮಟ್ಟದ ರಾಜಕೀಯ- ದಿನೇಶ್‌ ಪೂಜಾರಿ ಬೋಳ ಗ್ರಾಮ ಪಂಚಾಯತ್‌ ಅಧ್ಯಕ್ಷ

ರಾಜ್ಯ ಸರಕಾರ ನೀಡುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಬೋಳ ಗ್ರಾಮದಲ್ಲಿ ಅನುಷ್ಟಾನಗೊಳಿಸಲು ಅವಕಾಶ ನೀಡುವುದಿಲ್ಲವೆಂದು ಗ್ರಾಮ ಸಭೆಯಲ್ಲಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಗ್ರಾಮ ಪಂಚಾಯತ್‌ ಸದಸ್ಯರ ವಿರುದ್ದ ಕಾರ್ಕಳ ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ಬೋಳ ಗ್ರಾಮ ಪಂಚಾಯತ್‌ ಮುಂಬಾಗ ಮಾಡಿರುವ ಪ್ರತಿಭಟನೆಯು ಕಾಂಗ್ರೆಸ್‌ ನೇತೃತ್ವದ ರಾಜ್ಯ
ಸರಕಾರದ ಸರಣಿ ವೈಫಲ್ಯವನ್ನು ಮರೆಮಾಚಲು ಮಾಡಿರುವ ನಾಟಕವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಆಡಳಿತಕ್ಕೆ ಬಂದ ನಂತರ ಯಾವುದೇ ಇಲಾಖೆಗಳಗೆ ಅನುದಾನ ಬರುತ್ತಿಲ್ಲ. ರಸ್ತೆಗಳು ಸಂಚಾರ ಮಾಡದಷ್ಟು ಹದಗೆಟ್ಟು ರಸ್ತೆಗಳಲ್ಲಿ ಓಡಾಡುವುದೇ ಕಷ್ಟವಾಗಿದೆ. ಕಳೆದ ವರ್ಷವೂ ಸರಕಾರ ರಸ್ತೆ ನಿರ್ವಹಣೆಗೆ ಅನುದಾನ ಬಿಡುಗಡೆಗೊಳಿಸಿಲ್ಲ ಇದರಿಂದ ಜನ ಹತಾಶೆಗೊಂಡಿದ್ದು ಪಂಚಾಯತ್‌ ಸದಸ್ಯರಾದ ನಮಗೆ ಜನಸಾಮನ್ಯರ ಪ್ರಶ್ನೆಗಳನ್ನು ಎದುರಿಸುವುದೇ ದೊಡ್ಡ ಸವಾಲಾಗಿದೆ. ಜೊತೆಗೆ ಜನಸಾಮಾನ್ಯರು ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಸರಕಾರ ಅನುದಾನ ನೀಡದೇ ಇರುವುದರಿಂದ ಪ್ರತೀ ಹಂತದಲ್ಲು ನನ್ನನ್ನು ಸೇರಿದಂತೆ ಎಲ್ಲಾ ಪಕ್ಷದ ಗ್ರಾಮ ಪಂಚಾಯತ್‌ ಸದಸ್ಯರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರದ ವೈಫಲ್ಯದಿಂದಾಗಿ ಗ್ರಾಮ ಪಂಚಾಯತ್‌ ಸದಸ್ಯರುಗಳು ಪ್ರತಿದಿನ ಅವಮಾನ ಎದುರಿಸುವಂತ
ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮರೆಮಾಚಲು ಕಾರ್ಕಳ ಕಾಂಗ್ರೆಸ್‌ ನ ಒಂದು ತಂಡ ಪ್ರತಿಭಟನೆ ಮಾಡುವ ನೆಪದಲ್ಲಿ ಬೀದಿ ನಾಟಕ ಮಾಡುತ್ತಿದೆ. ಈ ಪ್ರತಿಭಟನೆಯಲ್ಲಿ ಬೋಳದ ಬೆರಳೆಣಿಕೆಯ ಕಾಂಗ್ರೆಸ್‌ ಕಾರ್ಯಕರ್ತರು ಮಾತ್ರ ಭಾಗವಹಿಸಿದ್ದು ಕಾರ್ಕಳದ ಬೇರೆ ಬೇರೆ ಭಾಗಗಳಿಂದ ತನ್ನ ಪಕ್ಷದ ಕಾರ್ಯಕರ್ತರನ್ನು ಕರೆತಂದು ಪ್ರತಿಭಟನೆ ಮಾಡುವ ದಾರಿದ್ರ್ಯ ಕಾಂಗ್ರೆಸ್‌ ಗೆ ಒದಗಿರವುದು ದುರಂತವೇ
ಸರಿ. ಈ ಪ್ರತಿಭಟನೆಗೆ ಸ್ಥಳೀಯರಿಂದ ಯಾವುದೇ ಸ್ಪಂದನೆ ದೊರಕದೇ ಇರುವುದನ್ನು ಕಂಡರೆ ಕಾಂಗ್ರೆಸ್‌ ಕಾರ್ಯಕರ್ತರೇ ರಾಜ್ಯ ಸರಕಾರದ ವಿರುದ್ದ ಬೇಸತ್ತಿದ್ದಾರೆ ಎಂದು ಗೊತ್ತಾಗುತ್ತದೆ.
ನಮ್ಮ ಸದಸ್ಯರು ವೈಯುಕ್ತಿಕವಾಗಿ ಸರಕಾರದ ಗ್ಯಾರಂಟಿ ಬೇಡ ಎಂದು ತಿರಸ್ಕರಿಸಿ ಮಾತನಾಡಿದ್ದೇ ಹೊರತು, ಪಂಚಾಯತ್‌ ವ್ಯಾಪ್ತಿಯಲ್ಲಿ ಗ್ಯಾರಂಟಿ ಅನುಷ್ಠಾನಗೊಳಿಸಲು ಬಿಡುವುದಿಲ್ಲ ಎಂದು ಹೇಳಿರುವುದಿಲ್ಲ. ಆದರೆ ಇದನ್ನೆ ತಿರುಚಹಿ ತಮ್ಮ ಬೇಳೆ ಬೇಯಿಸುವುದಕ್ಕೋಸ್ಕರ ಸಾರ್ವಜನಿಕವಾಗಿ ಸುಳ್ಳು ಹೇಳಿಕೆ ನೀಡಿ ಗ್ರಾಮ ಪಂಚಾಯತ್‌ ಎದುರು ಮಾಡಿರುವ ಕಾಂಗ್ರೆಸ್‌ ನ ಈ ಪ್ರತಿಭಟನೆ ತೀರಾ ಬಾಲಿಶವಾಗಿದೆ.
ಕಾಂಗ್ರೆಸ್‌ ಆಡಳಿತಕ್ಕೆ ಬಂದನಂತರ ಇದುವರೆಗೆ 9/11 ಸಮಸ್ಯೆಯನ್ನು ಬಗೆಹರಿಸಿಲ್ಲ. ಜನರು ಖಾತೆ ಪಡೆಯಲು ದಿನಾ ಅಲೆದಾಡುವ ಪರಿಸ್ಥಿತಿ ಇದೆ. ಕಟ್ಟಡ ಪರವಾನಿಗೆ ಸಿಗುತ್ತಿಲ್ಲ. ಮನೆ ಕಟ್ಟಲು ಕಟ್ಟಡ ಕಾಮಗಾರಿಗೆ ಮರಳು ಸಿಗುತ್ತಿಲ್ಲ , ಕೆಂಪುಕಲ್ಲು ಸಿಗುವುದೇ ಇಲ್ಲ, ಇಂತಹ ಬೆಟ್ಟದಷ್ಟು ದೊಡ್ಡದಾದ ನೂರಾರು ಸಮಸ್ಯೆಗಳನ್ನು ಮರೆಮಾಚುವ ಸಲುವಾಗಿ ಇಂತಹ ಕೃತಕ
ವಿಷಯಗಳನ್ನು ಸೃಷ್ಠಿಸಿ ಪ್ರತಿಭಟನೆ ಮಾಡಿರುವುದು ಹಾಸ್ಯಾಸ್ಪದ. ಸಾದ್ಯವಾದರೆ ಇವೆಲ್ಲ ಸಮಸ್ಯೆಗಳನ್ನು ಪರಿಹರಿಸುವಂತೆ ಕಾಂಗ್ರೆಸ್‌ ತನ್ನ ಸರಕಾರದ ವಿರುದ್ದ ಪ್ರತಿಭಟನೆ ಮಾಡಿ ಜನಸಾಮಾನ್ಯರಿಗೆ ನ್ಯಾಯ ಒದಗಿಸಲಿ ಎಂದು ಈ ಮೂಲಕ ಸಲಹೆ ನೀಡುತ್ತೇನೆ. ಇಂತಹ ಕ್ಷುಲಕ ಪ್ರತಿಭಟನೆಯನ್ನು ನಂಬುವುದಕ್ಕೆ ಬೋಳ ಗ್ರಾಮದ ಜನತೆ ಅನಕ್ಷರಸ್ಥರಲ್ಲ, ಪ್ರಬುದ್ದ, ಬುದ್ದಿವಂತ
ಹಾಗೂ ಪ್ರಾಮಾಣಿಕರಾದ ಬೋಳ ಗ್ರಾಮದ ಜನತೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಗೆ ತಕ್ಕ ಉತ್ತರ ನೀಡಲಿದ್ದಾರೆ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page