30.9 C
Udupi
Monday, April 13, 2026
spot_img
spot_img
HomeBlogಕಾರ್ಕಳ ಕಾಂಗ್ರೆಸ್, ಜನತೆಗೆ ಬೆಂಗಳೂರು ಪ್ರತಿಭಟನೆಯ ಸ್ಪಷ್ಟನೆ ನೀಡಬೇಕು

ಕಾರ್ಕಳ ಕಾಂಗ್ರೆಸ್, ಜನತೆಗೆ ಬೆಂಗಳೂರು ಪ್ರತಿಭಟನೆಯ ಸ್ಪಷ್ಟನೆ ನೀಡಬೇಕು

ಪರಶುರಾಮ ಥೀಮ್ ಪಾರ್ಕ್, ವಿವಾದಿತ ಕೇಂದ್ರವಾಗಿರಿಸುವುದು ಕಾಂಗ್ರೆಸ್ ಉದ್ದೇಶವೇ…?

ಬಿಜೆಪಿ ನೀಡಿದ ಮೂರು ಆಗ್ರಹಗಳಿಗೆ ಈಗಲೂ ಬದ್ಧ….

ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೋಯ್ಲಿ ಆಗ್ರಹ

ಕಾರ್ಕಳ : ಬೈಲೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಪರಶುರಾಮ ಥೀಂ ಪಾರ್ಕ್‌ನ್ನು ಒಂದು ವಿವಾದಿತ ಕೇಂದ್ರವನ್ನಾಗಿ ಜೀವಂತವಾಗಿರಿಸುವುದು ಕಾರ್ಕಳ ಕಾಂಗ್ರೆಸ್‌ನ ರಾಜಕೀಯ ಅಜೆಂಡಾ ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಹೇಳಿದ್ದಾರೆ.

ಪರಶುರಾಮ ಥೀಂ ಪಾರ್ಕ್ ಒಂದು ಪ್ರವಾಸ ಕೇಂದ್ರ. ಈ ವಿಚಾರದಲ್ಲಿ ಕಳೆದ 15 ತಿಂಗಳಿನಿಂದ ನಾವು ಮಾಡುತ್ತಿರುವ ಮೂರು ಆಗ್ರಹಗಳಿಗೆ ಈ ಕ್ಷಣಕ್ಕೂ ಬದ್ಧರಾಗಿದ್ದೇವೆ ಎಂದಿದ್ದಾರೆ.

ಆಗ್ರಹಗಳು

-ಸ್ಥಗಿತಗೊಂಡ ಥೀಂ ಪಾರ್ಕ್ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿಸಿ.

-ಯೋಜನೆಗೆ ನಿಗಧಿಗೊಳಿಸಿದ ಹಣವನ್ನು ತಕ್ಷಣವೇ ಬಿಡುಗಡೆ ಮಾಡಿ.

-ಥೀಂ ಪಾರ್ಕ್ ಕಾಮಗಾರಿಯಲ್ಲಿ ಅವ್ಯವಹಾರ ಆಗಿದೆ ಎಂದು ಏನು ನೀವು ಆರೋಪಿಸುತ್ತಿದ್ದೀರಿ, ನಿಮ್ಮದೇ ಸರಕಾರ ಇರುವುದರಿಂದ ಈ ಬಗ್ಗೆ ನ್ಯಾಯ ಸಮ್ಮತ ತನಿಖೆಯನ್ನು ತೀವ್ರಗೊಳಿಸಿ.

ರಾಜ್ಯ ಸರಕಾರ ಈ ಮೂರನ್ನೂ ಮಾಡದೇ ಮುಖ್ಯಮಂತ್ರಿಯಾದಿ ಕಾಂಗ್ರೆಸ್‌ನ ಹಿರಿ ಹಾಗೂ ಮರಿ ಪುಡಾರಿಗಳ ವೃಥಾ ಆರೋಪ ಮಾತ್ರ ಹಾಗೆಯೇ ಮುಂದುವರೆದಿದೆ. ಅಷ್ಟಕ್ಕೂ ಕಾರ್ಕಳದ ಕಾಂಗ್ರೆಸ್‌ ಮುಖಂಡರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿರುವುದಾದರೂ ಏಕೆ ? ಎಂದು ಮೊದಲು ಸ್ಪಷ್ಟಪಡಿಸಬೇಕು. ನಾವು ಈ ಮೂರೂ ಬೇಡಿಕೆ ಇಟ್ಟರೂ ಸಹ ಅದನ್ನು ಈಡೇರಿಸದ ನಿಮ್ಮದೇ ಸರಕಾರದ ವಿರುದ್ಧವೋ? ಅಥವಾ ಸದನಕ್ಕೆ ಮಾನ್ಯ ಮುಖ್ಯಮಂತ್ರಿಗಳು ತಪ್ಪು ಮಾಹಿತಿ ನೀಡಿರುವುದಕ್ಕೋ? ಅಥವಾ ನೀವು ನಿರಂತರವಾಗಿ ಮಾಡುತ್ತಿರುವ ಸುಳ್ಳು ಆಪಾದನೆಗಳು ಫಲ ಕೊಟ್ಟಿಲ್ಲ ಎಂಬ ಹತಾಶೆಗೋ? ಎಂದು ಪ್ರಶ್ನಿಸುವ ರವೀಂದ್ರ ಮೊಯ್ಲಿ ಈ ಎಲ್ಲದಕ್ಕೂ ನೀವು ಕಾರ್ಕಳದ ಸಮಸ್ತ ಜನತೆಗೆ ಉತ್ತರಿಸಬೇಕು ಎಂದು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page