
ದಿನಾಂಕ 30-11-2025 ರಂದು ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ (ರಿ.) ಮೂಡುಬಿದರೆ ಇದರ ರಜತ ಮಹೋತ್ಸವದ ಅಂಗವಾಗಿ ಕಾರ್ಕಳ, ಕುಕ್ಕುಂದೂರು ವಲಯದ ಸ್ವಸಹಾಯ ಸಂಘಗಳ ಆಶ್ರಯದಲ್ಲಿ ‘ಆದರ್ಶ ಕ್ರೀಡೋತ್ಸವ-2025’ ನಡೆಯಲಿದೆ.
ಕಾರ್ಕಳದ ತಹಶೀಲ್ದಾರರು ಮತ್ತು ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಪ್ರದೀಪ ಆರ್. ಕೆ.ಎ.ಎಸ್. ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಜೇಕಬ್ ವರ್ಗಿಸ್, ಶ್ರೀಮತಿ ವಿದ್ಯಾ ವಿ ಶೆಟ್ಟಿ, ಶ್ರೀಮತಿ ವಸಂತಿ ಶೆಟ್ಟಿ ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ 9:30ಕ್ಕೆ ಸ್ವಸಹಾಯ ಸಂಘಗಳ ಕ್ರೀಡಾಪಟುಗಳಿಂದ ಪಥಸಂಚಲನ ನಡೆಯಲಿದ್ದು ಮಧ್ಯಾಹ್ನ 12 ಗಂಟೆಯ ನಂತರ ಸ್ವಸಹಾಯ ಸಂಘಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಕಾರ್ಯಕ್ರಮದ ನೇರ ಪ್ರಸಾರ “ನಮ್ಮ ಕಾರ್ಲ ಯೂಟ್ಯೂಬ್ ಮತ್ತು ಚಾನೆಲ್ ನಂಬರ್.116” ನಲ್ಲಿ ನಡೆಯಲಿದೆ.






















































