ಮಳೆಗಾಲದ ತಿನಿಸು ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮ

ಕಾರ್ಕಳ:ನಮ್ಮ ಹಿರಿಯರು 80 90 ವರ್ಷಗಳ ಕಾಲ ಆರೋಗ್ಯವಾಗಿ ಬದುಕುತ್ತಿದ್ದರು. ಇದಕ್ಕೆ ಕಾರಣ, ಅವರ ಆಹಾರ ಪದ್ಧತಿ ಪ್ರತಿಯೊಂದು ಆಹಾರದಲ್ಲಿಯೂ ಔಷಧೀಯ ಗುಣಗಳುಳ್ಳ ತರಕಾರಿಯನ್ನು ಸಾಂಬಾರು ಪದಾರ್ಥಗಳನ್ನು ಬಳಸುತ್ತಿದ್ದರು ಒಬ್ಬ ವ್ಯಕ್ತಿ ಏನು ಎಂಬುದನ್ನು ಅವನು ಏನು ತಿನ್ನುತ್ತಾನೆ ಎಂಬುದರಿಂದ ಅರ್ಥೈಸಿಕೊಳ್ಳಬಹುದು ಆದ್ದರಿಂದ ಸಾಧ್ಯವಾದಷ್ಟು ಮನೆಯಲ್ಲಿಯೇ ತಯಾರಿಸಿದ ಮನೆಯ ಸುತ್ತಮುತ್ತ ದೊರೆಯುವ ಹಸಿರು ಸೊಪ್ಪು ಕಾಯಿಪಲ್ಲೆಗಳಿಂದ ಗಿಡಮೂಲಿಕೆಗಳಿಂದ ಆಹಾರ ತಯಾರಿಸಿ ತಿನ್ನಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಖ್ಯಾತ ವೈದ್ಯ ಡಾ. ಭರತೇಶ್ ರವರು ಮಹಿಳೆಯರಿಗೆ ಕಿವಿ ಮಾತು ನುಡಿದರು.
ಕಾರ್ಕಳ ಅನಂತಶಯನ ಶಾರದಾ ಮಹಿಳಾ ಮಂಡಲದ ತಿಂಗಳ ಕಾರ್ಯಕ್ರಮ ಮಳೆಗಾಲದ ತಿನಿಸು ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಶೈಲಜಾ ಮತ್ತು ಶ್ರೀಮತಿ ಶೈಲಜಾ ಮತ್ತು ಬಳಗದವರು ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಶ್ರೀಮತಿ ಶಶಿಕಲಾ ರಾವ್ ನಿರ್ವಹಿಸಿದರು ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮಂಡಲದ ಅಧ್ಯಕ್ಷ ಶ್ರೀಮತಿ ಸಾವಿತ್ರಿ ಮನೋಹರ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳ ಪರಿಚಯ ನೀಡಿ ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಸುಜಾತ ಭಂಡಾರಿ ಪುಸ್ತಕ ಮತ್ತು ಕಲಾಕೃತಿಯನ್ನು ನೀಡಿ ಸ್ವಾಗತಿಸಿದರು. ಸುಮಾರು ಒಂದುವರೆ ಗಂಟೆ ಕಾಲ ನಡೆದ ಕಾರ್ಯಕ್ರಮದಲ್ಲಿ ಸದಸ್ಯರು ಅತ್ಯುತ್ಸಾಹದಿಂದ ಪ್ರಶ್ನೋತ್ತರದಲ್ಲಿ ಭಾಗವಹಿಸಿದರು. ಮಹಿಳಾ ಮಂಡಲದ ತಿಂಗಳ ಅದೃಷ್ಟವಂತ ಮಹಿಳೆಯನ್ನು ಅಧ್ಯಕ್ಷರು ಬಹುಮಾನ ಇತ್ತು ಗೌರವಿಸಿದರು. ಸದಸ್ಯರು ಮಾಡಿದ ತಂದ ಬಗೆ ಬಗೆಯ ಮಳೆಗಾಲದ ತಿಂಡಿಗಳನ್ನು ಸವಿದು ಅತಿಥಿಗಳು ಮತ್ತು ಸದಸ್ಯರು ಸಂತೋಷ ಪಟ್ಟರು. ಕಾರ್ಯದರ್ಶಿ ಶ್ರೀಮತಿ ಹರ್ಷ ಕಾಮತ್ ಧನ್ಯವಾದ ಸಲ್ಲಿಸಿದರು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.