
ಕಾರ್ಕಳ: ಮಹಿಳೆಯರು, ಮಕ್ಕಳಿಗೆ ನ್ಯಾಯ ಒದಗಿಸಿ ಸಮಾಜದ ಸ್ವಸ್ಥ ಕಾಪಾಡಲು ಪ್ರಮುಖ ವಾಗಿ ಕೆಲಸ ಮಾಡಬೇಕಾಗಿದ್ದ ಮಹಿಳಾ ಸಾಂತ್ವನ ಕೇಂದ್ರ ಏಕ ಪಕ್ಷಿಯವಾಗಿ ಕೆಲಸ ಮಾಡುತ್ತಿದ್ದು ಸಮಾಜದ ನೊಂದವರ ಧ್ವನಿ ಆಗಿರುವ ಸಮಾಜ ಸೇವಕರ ಧ್ವನಿ ಅಡಗಿಸುವ ಪ್ರಯತ್ನವನ್ನು ಕಾರ್ಕಳ ಮಹಿಳಾ ಸಾಂತ್ವಾನ ಕೇಂದ್ರ ಮಾಡುತ್ತಿದೆ ಎಂದು ರಮಿತಾ ಸೂರ್ಯವಂಶಿ ಹೇಳಿದ್ದಾರೆ.
ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿರುವ ಅವರು
ದೂರುದಾರರು ದೂರು ನೀಡಲು ಬಂದಾಗ ಯಾವುದೇ ನೋಟಿಸ್ ಕೊಡದೇ ಏಕಏಕಿಯಾಗಿ ತಮ್ಮ ಕಚೇರಿಗೆ ಬರಲು ಹೇಳುವುದು. ಬರದೇ ಇದ್ದಲ್ಲಿ ದೂರುದಾರರಿಗೆ ಸ್ವತಃ ಇವರೇ ದೂರನ್ನು ಬರೆದು ಕೊಟ್ಟು ಸುಳ್ಳು ಕಂಪ್ಲೇಂಟ್ ಗಳನ್ನು ಸೃಷ್ಟಿಸುವಂತಹ ಕೆಲಸವನ್ನು ಕಾರ್ಕಳ ಸಾಂತ್ವಾನ ಕೇಂದ್ರದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಾಡುತ್ತಿದ್ದಾರೆ. ಈ ಮಹಿಳಾ ಒಕ್ಕೂಟದ ಅಧ್ಯಕ್ಷರು ಎಲ್ಲ ವಿಚಾರದಲ್ಲೂ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುತ್ತಿದ್ದು, ನಿಜವಾಗಿಯೂ ನೊಂದವರಿಗೆ ನ್ಯಾಯ ಇವರಿಂದ ಸಿಗುತಿಲ್ಲ. ಮಹಿಳಾ ಅಧ್ಯಕ್ಷೆಯ ಬಗ್ಗೆ ಸಾರ್ವಜನಿಕವಾಗಿಯೂ ಹಲವು ದೂರುಗಳು ಕೇಳಿ ಬರುತಿದ್ದು, ಈ ಎಲ್ಲ ವಿಚಾರಗಳು
ಗಮನಕ್ಕೆ ಬಂದ ಹಿನ್ನಲೆಯಲ್ಲಿ ಕಾರ್ಕಳ ಸಾಂತ್ವನ ಕೇಂದ್ರದ ಮಹಿಳಾ ಒಕ್ಕೂಟದ ಅಧ್ಯಕ್ಷರ ಬದಲಾವಣೆ ಅಗತ್ಯ ಎಂದು ಈಗಾಗಲೇ ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ದೂರಿನ ಮೇಲೆಯೂ ಮುಂದೆ ಅವರನ್ನೇ ಮುಂದುವರಿಸಿದಲ್ಲಿ ಮಹಿಳೆಯರು ಒಟ್ಟು ಗೂಡಿ ಪ್ರತಿಭಟನೆ ನಡೆಸಲಿದ್ದೇವೆ ಮತ್ತು ಕಾನೂನು ರೀತಿಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಿದ್ದೇವೆ
ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಯವರು ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.





