
ಯಕ್ಷಕಲಾರಂಗ ರಿಜಿಸ್ಟರ್ಡ್ ಕಾರ್ಕಳ ಮತ್ತು ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ರಿಜಿಸ್ಟರ್ಡ್ ಮಂಗಳೂರು ಇದರ ಸಹಯೋಗದೊಂದಿಗೆ ಕಾರ್ಕಳ ಸುಂದರ ಪುರಾಣಿಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ, ಇಲ್ಲಿ ಯಕ್ಷಗಾನ ತರಗತಿ ಉದ್ಘಾಟನೆಯಾಯಿತು.
ಕಾರ್ಕಳ ಯಕ್ಷಕಲಾರಂಗದ ಕಾರ್ಯದರ್ಶಿ ಮಹಾವೀರ ಪಾಂಡಿಯವರು ಯಕ್ಷಕಲಾರಂಗ ನಡೆದು ಬಂದ ದಾರಿ, ವಿದ್ಯಾರ್ಥಿಗಳಿಗೆ ಸಿಗುವ ಅನುಕೂಲತೆಗಳ ಬಗ್ಗೆ ತಿಳಿಸಿದರು. ಸಂಚಾಲಕ ಪದ್ಮನಾಭಗೌಡರು ಉದ್ಘಾಟಿಸಿ ಯಕ್ಷಗಾನದಿಂದ ಮನಸ್ಸಿಗೆ ಸಿಗುವ ಸಂತಸ, ಅದರ ಮಹತ್ವ ತಿಳಿಸಿದರು.ಯಕ್ಷಕಲಾರಂಗದ ಅಧ್ಯಕ್ಷ ವಿಜಯಶೆಟ್ಟಿಯವರು ಶುಭ ಹಾರೈಸಿದರು.
ಯಕ್ಷಗಾನ ಗುರುಗಳಾದ ಅಜಿತ್ ಜೈನ್ ರವರಿಗೆ ವೀಳ್ಯ ನೀಡಿ ತರಗತಿಯಲ್ಲಿ ನಾಟ್ಯಾರಂಭ ಮಾಡಲಾಯಿತು.ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ವೀಣಾಭಂಡಾರಿಯವರು ಶಾಲಾ ವಿದ್ಯಾರ್ಥಿಗಳಿಗೊಂದು ಉತ್ತಮ ಅವಕಾಶ ,ಉಪಯೋಗಿಸಿಕೊಳ್ಳಿ ಎಂಬ ಕರೆ ನೀಡಿದರು.ಯಕ್ಷಕಲಾರಂಗದ ಉಪಾಧ್ಯಕ್ಷ ಶ್ರೀಯುತ ಮಾಧವ ಕೋಶಾಧಿಕಾರಿ ಶ್ರೀವರ್ಮ ಅಜ್ರಿ ಶಿಕ್ಷಕ ಹರಿಶ್ಚಂದ್ರ ಬಾಯರಿ ಉಪಸ್ಥಿತರಿದ್ದರು.ನೋಡಲ್ ಶಿಕ್ಷಕಿ ಶ್ರೀಮತಿ ವೇದಾವತಿ ಧನ್ಯವಾದ ತಿಳಿಸಿದರು.ಶಾಲಾ ಮುಖ್ಯೋಪಾಧ್ಯಾಯ ದಿವಾಕರ್ ಸ್ವಾಗತಿಸಿ ಶಿಕ್ಷಕಿ ಶೈಲಜಾ ಹೆಗ್ಡೆಯವರು ಕಾರ್ಯಕ್ರಮ ನಿರೂಪಿಸಿದರು.