
ಕಾರ್ಕಳದ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ವತಿಯಿಂದ ತಿಂಗಳ ಕಾರ್ಯಕ್ರಮದಡಿಯಲ್ಲಿ ಕಾರ್ಕಳದ ಸಾಹಿತಿ, ನಾಟಕಕಾರ ಶ್ರೀ ಗಂಗಾಧರ ಫಣಿಯೂರು ಅವರಿಂದ “ತುಳುನಾಡ ಸಿರಿ “ಯ ಕುರಿತಾಗಿ ಕಾರ್ಯಕ್ರಮ ಬೋರ್ಡ್ ಹೈಸ್ಕೂಲಿನ ಅವರಣದಲ್ಲಿ ಇತ್ತೀಚಿಗೆ ನಡೆಯಿತು.
ಶತಮಾನಗಳ ಹಿಂದೆಯೇ ಹೆಣ್ಣೊಬ್ಬಳು ಪುರುಷಪ್ರಧಾನ ಸಮಾಜದ ಧೋರಣೆಗಳನ್ನು ಪ್ರತಿರೋಧಿಸಿ, ಕುಟುಂಬ ವ್ಯವಸ್ಥೆಯನ್ನು ಸಂಘಟಿಸಿದ ರೀತಿ ಇಂದಿಗೂ ಅನುಕರಣೀಯ. ಮಾದರಿ ಹೆಣ್ಣು ಸಿರಿಯ ಜೀವನ ಜೀವನಗಾಥೆಯನ್ನು ಅತ್ಯಂತ ಮರ್ಮಾಸ್ಪರ್ಶಿಯಾಗಿ ಅವರು ಪ್ರಸ್ತಾಪಿಸಿದರು. ಸಂಘಟನೆಯ ಅಧ್ಯಕ್ಷೆ ಪ್ರೊl ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿದರು. ಶ್ರೀಮತಿ ರೂಪ ಚಿಪ್ಲೊಂಕರ್ ಪ್ರಾರ್ಥಿಸಿದರು. ಕಾರ್ಯದರ್ಶಿ ಡಾl ಮಾಲತಿ. ಜಿ. ಪೈ ಇವರು ಕಾರ್ಯಕ್ರಮ ನಿರೂಪಿಸಿ ಡಾ.ಸುಮತಿ.ಪಿ ವಂದಿಸಿದರು.



















