
ಮಕ್ಕಳು ದೇವರಿಗೆ ಸಮಾನ ಅನ್ನುತ್ತೆವೆ ಇಂತಹ ಸಮಯದಲ್ಲಿ ಮಕ್ಕಳು ಮಾಡುದೇ ವ್ಯಾಪಾರಕ್ಕೆ ಅನ್ನುವ ರೀತಿ ಕೆಲವು ಸನ್ನಿವೇಶ ಕಣ್ಣ ಮುಂದೆ ನಡೆಯುವಾಗ ನಾವು ಎಂಥ ಸಮಾಜದಲ್ಲಿ ಇದ್ದೇವೆ ಅನ್ನೋದಕ್ಕೂ ನಿಜವಾಗಲೂ ಭಯವಾಗುತ್ತಿದೆ.
ಕಾರ್ಕಳದ ಒಂದು ಪ್ರಸಿದ್ಧ ಆಸ್ಪತ್ರೆಯಲ್ಲಿ 2 ತಿಂಗಳ ಹಿಂದೆ ಇನ್ನು ವಿವಾಹವೇ ಆಗದ ಶಿರ್ವ ಮೂಲದ ಯುವತಿಗೆ ಮಗು ಜನಿಸುತ್ತದೆ. ಆಕೆ ಮದುವೆ ಆಗದ ಕಾರಣ ಅದನ್ನು ಸಮಾಜದಿಂದ ಅಡಗಿಸಿ ಮಗುವನ್ನು ಕಾರ್ಕಳದ ಆಶಾಕರ್ತೆ ಮೂಲಕ ಹಣಕ್ಕಾಗಿ ಮಗುವನ್ನು ಮಾರಾಟ ಮಾಡುತಾರೆ ಅನ್ನುವ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ಕೊಟ್ಟಾಗ ಮಗುವನ್ನು ಅಕ್ರಮವಾಗಿ ಆಶ್ರಯ ಕೊಟ್ಟಿರೋದು ಗಮನಕ್ಕೆ ಬಂತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಸಹಾಯದಿಂದ ಮಗುವನ್ನು ಕ್ಷೇಮವಾಗಿ ರಕ್ಷಿಸುವ ಕೆಲಸ ಆಗಿದೆ. ಮುಂದೆ ಆಶಾಕರ್ತೆಯ ಜವಾಬ್ದಾರಿ ಮುಕ್ತಿ ಗೊಳಿಸಬೇಕು ಅಲ್ಲದೇ ಯುವತಿಯ ಈ ಸ್ಥಿತಿಗೆ ಕಾರಣ ವಾದವರನ್ನು ಕರೆಸಿ ಯುವತಿಗೆ ನ್ಯಾಯ ಒದಗಿಸ ಬೇಕೆಂದು ಇಲಾಖೆಗೆ ಮನವಿ ಸಲ್ಲಿಸಲಾಯಿತು.
ಮಗು ಈಗ ಮಕ್ಕಳ ಸಂರಕ್ಷಣಾ ಇಲಾಖೆ ಸೇರಿದು ಅಪ್ಪ ಅಮ್ಮನ ಪ್ರೀತಿಯಿಂದ ವಂಚಿತರಾಗಬಾರದು ಎನ್ನೋದು ನಮ್ಮ ಉದ್ದೇಶ, ಸರಕಾರದ ಕೆಲಸ ದೇವರ ಕೆಲಸ ಹೀಗಿರುವಾಗ ಅದನ್ನು ದುರುಪಯೋಗ ಮಾಡಿ ಸುಳ್ಳು ತಾಯಿ ಕಾರ್ಡ್, ಸುಳ್ಳು ಜನನ ಪ್ರಮಾಣ ಪತ್ರ ಮಾಡಿಕೊಟ್ಟಿರುವ ಆಶಾಕಾರ್ಯಕರ್ತೆಯ ತಪ್ಪು ಸಮಾಜದಲ್ಲಿ ಇನ್ನು ಯಾರಿಂದಲೂ ಆಗಬಾರದು. ಸಂಬಂಧ ಪಟ್ಟ ಇಲಾಖೆ ಇಂತಹ ವಿಷಯದಲ್ಲಿ ತೀರ್ವವಾಗಿ ಕಠಿಣ ಕ್ರಮ ತೆಗೆದು ಕೊಳ್ಳಬೇಕು ಎಂದು ಈ ಮೂಲಕ ಅಗ್ರಹಿಸುತ್ತೆನೆ. ಸ್ವಸ್ಥ ಸಮಾಜವೇ ನಮ್ಮ ಉದ್ದೇಶ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತ ಸೂರ್ಯವಂಶಿ ಅವರು ಪತ್ರಿಕಾ ಹೇಳಿಕೆ ನೀಡಿದರು.





