
ಕಾರ್ಕಳದ ಪೆರ್ವಾಜೆ ಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಜನಸ್ಪಂದನಾ ಸಭೆಯಲ್ಲಿ ಕಾಂಗ್ರೇಸ್ ವಕ್ತಾರ ಶುಭದ ರಾವ್ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಅಡ್ಡಿ ಪಡಿಸಿದ್ದಾರೆ ಎಂದು ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಳು, ಪೊಲೀಸ್ ಅಧೀಕ್ಷಕರು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದು, ಸಭೆ ಸುಸೂತ್ರವಾಗಿ ನಡೆಸಲು ತಾಲೂಕು ಆಡಳಿತ ಎಲ್ಲಾ ವ್ಯವಸ್ತೆ ಮಾಡಿದ್ದು ಇಲಾಖಾ ವತಿಯಿಂದ ಸಭೆಯ ಚಿತ್ರೀಕರಣದ ವ್ಯವಸ್ತೆ ಕೂಡ ಮಾಡಲಾಗಿತ್ತು. ಆದರೆ ಜನಸಾಮಾನ್ಯರು ಅವರಿಗೆ ಸಂಬಂಧಪಟ್ಟ ಬೇರೆ ತರಹದ ಸಮಸ್ಯೆಗಳನ್ನು ಪ್ರಸ್ತಾಪ ಮಾಡುವುದರಿಂದ ಅವರ ಹಿತದೃಷ್ಟಿಯಿಂದ ಅದನ್ನು ಗೌಪ್ಯವಾಗಿಡುವುದು ಇಲಾಖಾ ಕರ್ತವ್ಯವಾಗಿರುವುದರಿಂದ ಸಭೆಯ ನಡಾವಳಿಯ ಸಾರ್ವಜನಿಕ ನೇರಪ್ರಸಾರಕ್ಕೆ ಮತ್ತು ಚಿತ್ರೀಕರಣಕ್ಕೆ ಅವಕಾಶ ಇರುವುದಿಲ್ಲ.ಆದರೆ ಸಭೆಯಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶದಿಂದ ಕೆಲವೊಂದು ವ್ಯಕ್ತಿಗಳು ಪರಶುರಾಮ ವಿಗ್ರಹದ ವಿವಾದ ಮಾನ್ಯ ನ್ಯಾಯಾಲಯ ಮತ್ತು ನಾಗ್ ಭೂಷಣ್ ದಾಸ್ ನೇತೃತ್ವದಲ್ಲಿ ಸಿ.ಓ.ಡಿ ತನಿಖೆ ಹಾಗೂ ಕಾರ್ಕಳ ನಗರ ಠಾಣೆಯಲ್ಲಿ ಅ.ಕ್ರ ಸಂಖ್ಯೆ 120/24 ರಲ್ಲಿ ತನಿಖೆಗೆಬಾಕಿ ಇರುವ ವಿಷಯ ತಿಳಿದಿದ್ದಾಗ್ಯೂ ಸಭೆಯಲ್ಲಿ ಪ್ರಸ್ತಾಪಿಸಲು ಪ್ರಯತ್ನ ಪಟ್ಟಾಗ ಜಿಲ್ಲಾಧಿಕಾರಿಯವರು ತಿಳಿಹೇಳಿದರೂ ಕೇಳದೆ ಏರು ದ್ವನಿಯಲ್ಲಿ ಗಲಾಟೆ ಮಾಡಿ ಸಭೆಯ ನಡಾವಳಿಗೆ ಅಡ್ಡಿಪಡಿಸಿ ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಕೋಲಾಹಲವೆಬ್ಬಿಸಲು ಪ್ರಯತ್ನ ಪಟ್ಟಾಗ ಅನಿವಾರ್ಯ ವಾಗಿ ಪೋಲೀಸ್ ಉಪಾಧೀಕ್ಷಕರು ಮೇಲಾಧಿಕಾರಿಗಳ ನಿರ್ದೇಶನದಂತೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನ ಪಟ್ಟಿರುತ್ತಾರೆ.
ಸಭೆಯಲ್ಲಿ ಗಲಾಟೆ ಎಬ್ಬಿಸಿ, ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ ಕಾರ್ಕಳ ಕಾಂಗ್ರೆಸ್ಸಿನ ವಕ್ತಾರ ಸುಭೋದ್ ರಾವ್ ರವರ ವರ್ತನೆ ಖಂಡನೀಯ. ಕಾರ್ಕಳ ಬಿಜೆಪಿ ಇದನ್ನು ತೀವ್ರವಾಗಿ ಖಂಡಿಸುತ್ತದೆ ಹಾಗೂ ಪೋಲೀಸ್ ಇಲಾಖೆ ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಸುಮೋಟೋ ಕೇಸ್ ದಾಖಲಿಸಬೇಕು ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯಿಲಿ ಆಗ್ರಹಿಸಿದ್ದಾರೆ





