
ಕಾಂತಾವರ: ಕಾಂತಾವರದ ಶ್ರೀ ಕಾಂತೇಶ್ವರ ದೇವರ ಜಾತ್ರಾ ಮಹೋತ್ಸವದ ರಥೋತ್ಸವದಂದು ಶೋಧನ್ ಎಂ.ಜೈನ್ ಕೊಡಗುತ್ತು ನಿರ್ಮಿಸಿದ ಕಾಂತೇಶ್ವರ ದೇವರ ಭಕ್ತಿ ಗೀತೆಯ ಆಲ್ಬಂ ಸಾಂಗ್ ನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಜೀವಂಧರ ಬಲ್ಲಾಳ್ ಅವರು ಲೋಕಾರ್ಪಣೆಗೊಳಿಸಿದರು.
ಹಿನ್ನೆಲೆ ಗಾಯಕರಾದ ಅನೀಶ್ ಕಿನ್ನಿಗೋಳಿ, ವಿದ್ಯಾ ಬೇಲಾಡಿ, ಬರಹಗಾರ ಶೈಲೇಶ್ ಆಚಾರ್ಯ ಮೈಲೂಟ್ಟು ಮತ್ತು ಸಲಹೆಗಾರರಾದ ಮನೀಶ್ ಶೆಟ್ಟಿ ಕಾಂತಾವರ, ಅಭಿಮಾನ್ ಎಂ.ಜೈನ್ ಮತ್ತು ಶ್ರೀಮನ್ ಎಂ.ಜೈನ್ ಉಪಸ್ಥಿತರಿದ್ದರು.
ಕಾಂತೇಶ್ವರ ದೇವರ ಸುಂದರ ಭಕ್ತಿಗೀತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಮನತಣಿಸುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಸಾಮಾಜಿಕ ಜಾಲತಾಣಗಳ ಇಂದಿನ ದಿನಮಾನಗಳಲ್ಲಿ ಈ ಭಕ್ತಿ ಗೀತೆ ಅತ್ಯಂತ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಭಕ್ತರನ್ನು ತಲುಪಿದ್ದು ವಿಶೇಷವಾಗಿದೆ.








