ಪಂದ್ಯಕೂಟಕ್ಕೆ ದಾಖಲೆ ಮಟ್ಟದ 135 ತಂಡಗಳ ನೊಂದಾವಣಿ
ಅಥ್ಲೆಟಿಕ್ ಸ್ಪರ್ಧೆಗೆ, ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳ ನಿರೀಕ್ಷೆ
ಶುಭದ ರಾವ್, ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್

ಕಾರ್ಕಳ ಕಾಂಗ್ರೆಸ್ ವತಿಯಿಂದ ಜನವರಿ 25 ಮತ್ತು 26 ರಂದು ಸ್ವರಾಜ್ಯ ಮೈದಾನದಲ್ಲಿ ಹಮ್ಮಿಕೊಂಡಿರುವ ಕ್ರೀಡೋತ್ಸವದಲ್ಲಿ ಭಾಗವಹಿಸಲು ಕ್ರೀಡಾಪಟುಗಳು ಆಸಕ್ತಿ ತೋರುತ್ತಿದ್ದು ಪಂದ್ಯಕೂಟದ ಎಲ್ಲಾ ವಿಭಾಗದಲ್ಲಿ ಒಟ್ಟು 135 ದಾಖಲೆ ಮಟ್ಟದಲ್ಲಿ ತಂಡಗಳು ನೋಂದಾವಣಿಯಾಗಿವೆ.
ಜನವರಿ 26 ಸಂಜೆ 3:30 ರಿಂದ ನಡೆಯುವ ಪಂದ್ಯಕೂಟದಲ್ಲಿ ವಾಲಿಬಾಲ್ 44 ತಂಡ, ತ್ರೋಬಾಲ್ 25 ತಂಡ, ಹಗ್ಗಜಗ್ಗಾಟ ಪುರುಷರ 30 ಮಹಿಳೆಯರು 20 ತಂಡ, ಖೋಖೋ ಪುರುಷರು 10, ಮಹಿಳೆಯರ 7 ತಂಡಗಳು ತಮ್ಮ ತಂಡದ ಹೆಸರನ್ನು ದಾಖಲಿಸಿಕೊಂಡಿವೆ.
ಕ್ರೀಡಾಕೂಟದಲ್ಲಿ ನಿರೀಕ್ಷೆಗಿಂತ ಹೆಚ್ಚು ತಂಡಗಳು ಭಾಗವಹಿಸಿದ ಕಾರಣ ಪಂದ್ಯಕೂಟವನ್ನು ವೇಗವಾಗಿ ನಡೆಸುವ ಉದ್ದೇಶದಿಂದ ವಾಲಿಬಾಲ್ ಮತ್ತು ತ್ರೋಬಾಲ್ ಪಂದ್ಯಗಳು ಎರಡು ಅಂಕಣಗಳಲ್ಲಿ ಖೋಖೋ ಮತ್ತು ಹಗ್ಗಜಗ್ಗಾಟ ನಿಗದಿಯಂತೆ ಒಂದು ಅಂಕಣದಲ್ಲಿ ನಿರಂತರವಾಗಿ ನಡೆಯಲಿದೆ.
ಜನವರಿ 25 ಸಂಜೆ ನಡೆಯುವ ಅಥ್ಲೆಟಿಕ್ ಸ್ಪರ್ಧೆಗೂ ಸ್ಪರ್ಧಿಗಳು ಆಸಕ್ತಿ ತೋರುತ್ತಿದ್ದು ಸಾವಿರಕ್ಕೂ ಹೆಚ್ಹು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ ನೊಂದಾವಣಿಯು ಸಂಜೆ 3:30 ರಿಂದ ನಡೆಯಲಿದ್ದು ಪಥಸಂಚಲನ ಮತ್ತು ಉದ್ಘಾಟನೆ ತಕ್ಷಣ ಎಲ್ಲಾ ಆರು ವಿಭಾಗದ ಐದು ಸ್ಪರ್ಧೆಗಳೂ ಪ್ರಾರಂಭಗೊಳ್ಳಲಿದೆ.
ಬಹುಮಾನ ಅಥ್ಲೆಟಿಕ್ ವಿಜೇತರಿಗೆ ಪ್ರಥಮ ನಗದು ರೂ1000 ಸಾವಿರ, ದ್ವಿತೀಯ ನಗದು ರೂ 750, ತೃತೀಯ ನಗದು ರೂ500 ಹಾಗೂ ಪದಕ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
ಪಂದ್ಯದ ವಿಜೇತರಿಗೆ ಪ್ರಥಮ ನಗದು ರೂ15000 ಸಾವಿರ ದ್ವಿತೀಯ ನಗದು ರೂ10,000 ತೃತೀಯ ನಗದು ರೂ 6000 ಚತುರ್ಥ ನಗದು ರೂ 4000 ಹಾಗೂ ಶಾಶ್ವತ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು ಜೊತೆಗೆ ಕ್ರೀಡೋತ್ಸವದಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗುವುದು. ಪಥಸಂಚಲನದ ವಿಜೇತರಿಗೆ ಪ್ರಥಮ ನಗದು ರೂ15,000 ಸಾವಿರ, ದ್ವಿತೀಯ ನಗದು10,000 ಸಾವಿರ ತೃತೀಯ ನಗದು 6000 ಸಾವಿರ ಹಾಗೂ ಚತುರ್ಥ ನಗದು 4000 ಸಾವಿರ ನೀಡಿ ಪುರಸ್ಕಾರಿಸಲಾಗುವುದು.
ಸ್ಪರ್ಧೆಯ ಎಲ್ಲಾ ವಿಭಾಗಗಳಲ್ಲಿಯೂ ಅನುಭವಿ ಹಿರಿಯ ತೀರ್ಪುಗಾರರು ಕಾರ್ಯನಿರ್ವಹಿಸಲಿದ್ದು ಸಾರ್ವಜನಿಕರು ಭಾಗವಹಿಸುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.








