19 C
Udupi
Wednesday, December 24, 2025
spot_img
spot_img
HomeBlogಕಳೆದ 11 ವರ್ಷಗಳಿಂದಲೂ ಕೇಂದ್ರ ಸರ್ಕಾರ ದಿನದ 24 ಗಂಟೆಯೂ ಮುಸ್ಲಿಂ.. ಮುಸ್ಲಿಂ.. ಮುಸ್ಲಿಂ.. ಅಂತ...

ಕಳೆದ 11 ವರ್ಷಗಳಿಂದಲೂ ಕೇಂದ್ರ ಸರ್ಕಾರ ದಿನದ 24 ಗಂಟೆಯೂ ಮುಸ್ಲಿಂ.. ಮುಸ್ಲಿಂ.. ಮುಸ್ಲಿಂ.. ಅಂತ ಬೈಯೋದು ಬಿಟ್ರೆ, ಬೇರೇನು ಮಾಡಿಲ್ಲ: ಸಚಿವ ಸಂತೋಷ್ ಲಾಡ್

ಬೆಂಗಳೂರು: ಸಚಿವ ಸಂತೋಷ್‌ ಲಾಡ್‌ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು ಈ ವೇಳೆ ಕಳೆದ 11 ವರ್ಷಗಳಿಂದಲೂ ಕೇಂದ್ರ ಸರ್ಕಾರ ದಿನದ 24 ಗಂಟೆಯೂ ಮುಸ್ಲಿಂ.. ಮುಸ್ಲಿಂ.. ಮುಸ್ಲಿಂ.. ಅಂತ ಬೈಯೋದು ಬಿಟ್ರೆ ಬೇರೇನು ಮಾಡಿಲ್ಲ ಎಂದು ಸಿಡಿಮಿಡಿಗೊಂಡಿದ್ದಾರೆ.

ಸರ್ಜಿಕಲ್‌ ಸ್ಟ್ರೈಕ್‌ ಏನಾಯ್ತು? ಪುಲ್ವಾಮಾ ದಾಳಿ ಏನಾಯ್ತು? ಯಾರೂ ಚರ್ಚೆ ಮಾಡ್ತಿಲ್ಲ ಯಾಕೆ..? ಯಾಕೆ ಮೆರವಣಿಗೆ ಮಾಡ್ತೀರ, ನೀವು ಹಿಂದೂಗಳನ್ನ ಕೊಂದಿರೋದು. 2014ರಿಂದ ಆಗಿರುವ ಹಿಂದೂಗಳ ಹತ್ಯೆಯ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊರಬೇಕು. 20 ರಾಜ್ಯಗಳಲ್ಲಿ ನಿಮ್ಮ ಪಕ್ಷದವರೇ ಸಿಎಂ, ನೀವೆ ಪಿಎಂ, ಬರೀ ಹಿಂದೂ ಮುಸ್ಲಿಂ ಬಿಟ್ರೆ ಬೇರೆ ಏನೂ ಇಲ್ಲ. ಸರ್ಕಾರ ಬಂದು ಇವತ್ತು ವೈಫಲ್ಯ ಅಂತ ಹೇಳಿದೆ. ಇವರೇ ಆರ್ಟಿಕಲ್ 370 ರದ್ದು ಮಾಡಿದ್ರು, ಎಲ್ಲಾ ನಮ್ಮ ಕಂಟ್ರೋಲ್‌ನಲ್ಲೇ ಇದೆ ಅಂದ್ರು. ನಾನು ನೋಡಿದಂತೆ ಅಲ್ಲಿನ ಲೋಕಲ್ ಜನ ಬ್ಯೂಟಿಫುಲ್ ಆಗಿದ್ದಾರೆ. ಆದ್ರೆ ನಮಗಿಂತ ಹೆಚ್ಚಾಗಿ ಅಲ್ಲಿನ ಜನ ರಕ್ತ ಕಣ್ಣೀರು ಹಾಕ್ತಿದ್ದಾರೆ. ಅಲ್ಲಿ ಹೇಗೆ ಬಂದೂಕು ಬಂತು, ಅವರು ಹೇಗೆ ಬಂದ್ರು ಅದರ ಬಗ್ಗೆ ಚರ್ಚೆ ಮಾಡ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 11 ವರ್ಷಗಳಿಂದ ದಿನಬೆಳಗಾದ್ರೆ ಹಿಂದೂ ಮುಸ್ಲಿಂ ವಿಚಾರ ಬಿಟ್ಟರೆ ಬೇರೇನಿಲ್ಲ. ಅಲ್ಲಿ ಉಗ್ರರ ದಾಳಿಯಾದಾಗ 2000 ಪ್ರವಾಸಿಗರನ್ನು ಸ್ಥಳಾಂತರ ಮಾಡಿದ್ದು, ಅದೇ ಮುಸ್ಲಿಮರು. ಇನ್ನಾದ್ರೂ ಒಳ್ಳೆಯ ವಿಷಯಗಳ ಬಗ್ಗೆ ಚರ್ಚೆ ಮಾಡೋಣ ಎಂದು ಮನವಿ ಮಾಡಿದರು.

ಪಹಲ್ಗಾಮ್ ನಲ್ಲಿ ಪ್ರವಾಸಿಗರಿಗೆ ಆಗಿದ್ದು ಭಯಾನಕ ಘಟನೆ. ಶ್ರೀನಗರದಲ್ಲಿ ಹೆಜ್ಜೆ ಹೆಜ್ಜೆಗೂ ಚೆಕ್‌ಪೋಸ್ಟ್ ಇದೆ. ಒಂದು ಹುಳನೂ ತಪ್ಪಿಸಿಕೊಂಡು ಹೋಗೋಕೆ ಆಗಲ್ಲ. ಗೃಹ ಸಚಿವರನ್ನ ಕೇಳ್ತೇನೆ, ದಾಳಿ ನಡೆದಾಗ ಯಾಕೆ ಒಬ್ಬ ಸೆಕ್ಯೂರಿಟಿನೂ ಇಲ್ಲ ಯಾಕೆ..? ಇದರ ಬಗ್ಗೆ ಚರ್ಚೆ ಆಗಬೇಕೇ ವಿನಃ ಬೇರೆಯದ್ದಕ್ಕಲ್ಲ. ಮಾತಿಗೆ ಮುನ್ನ ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹಿಂದೂ-ಮುಸ್ಲಿಂ ಅಂತಾರೆ. ಹಾಗಾದ್ರೆ ನಿಮ್ಮ ಅವಧಿಯಲ್ಲಿ ಹಿಂದೂಗಳಿಗೆ ಅನ್ಯಾಯ ಆಯ್ತು ಅಂತ ಒಪ್ಪಿಕೊಳ್ಳಿ ಎಂದು ಕಿಡಿಕಾರಿದರು.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page