ಡಿ. 28ನೇ ಶನಿವಾರ,ತಾಲೂಕು ಗಮಕ ಸಮ್ಮೇಳನ
ಶ್ರೀಮದ್ ಭುವನೇಂದ್ರ ಪ್ರೌಢಶಾಲೆ , ಶ್ರೀ ವರದೇಂದ್ರ ಸದನ ಸಭಾಂಗಣ

ಕಾರ್ಕಳ : ಡಿ. 28 2024ನೇ ಶನಿವಾರದಂದು ಶ್ರೀಮದ್ ಭುವನೇಂದ್ರ ಪ್ರೌಢಶಾಲಾ ಶ್ರೀ ವರದೇಂದ್ರ ಸದನ ಸಭಾಂಗಣದಲ್ಲಿ ತಾಲೂಕು ಗಮಕ ಸಮ್ಮೇಳನ ನಡೆಯಲಿದೆ.
ಈ ಕಾರ್ಯಕ್ರಮವು ಶ್ರೀ ಮುನಿರಾಜ ರೆಂಜಾಳ ಅವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5:00 ತನಕ ನಡೆಯಲಿದೆ. ಶ್ರೀವ್ಯಾಸ ರಘುಪತಿ ಸಂಸ್ಕೃತ ವಿದ್ಯಾಶಾಲಾ ಫಂಡ್ (ರಿ) ಕಾರ್ಕಳ ಇದರ ಅಧ್ಯಕ್ಷರಾದ ಎ.ಯೋಗೀಶ್ ಹೆಗ್ಡೆ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಅತಿಥಿಗಳಾಗಿ ರಾಮ ಭಟ್ ಎಸ್, ಕಮಲಾಕ್ಷ ಕಾಮತ್ ಕೆ, ನಿತ್ಯಾನಂದ ಪೈ, ಭಾಸ್ಕರ್ ಟಿ, ಶ್ರೀಮತಿ ಅನುಪಮಾ ದೇವಿ ಚಿಪ್ಲೂಣಕರ್, ಆರ್ ನಾರಾಯಣ ಶೆಣೈ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ.
ಬೆಳಗ್ಗೆ 10:30 ರಿಂದ ಗಮಕ ವಾಚನ-ವ್ಯಾಖ್ಯಾನ “ಸಾವಿತ್ರಿಯ ಬಾಲ್ಯ”, 11:00 ರಿಂದ ಗಮಕವಾಚನ- ವ್ಯಾಖ್ಯಾನ “ಕರ್ಣಭೇದ”, 11:30 ರಿಂದ “ಕಾವ್ಯೋಲ್ಲಾಸ” ಮಧ್ಯಾಹ್ನ 2 ಗಂಟೆಯಿಂದ “ಗಮಕ -ದೃಶ್ಯ ರೂಪಕ”, 2:35 ರಿಂದ “ಊರ್ವಶಿಯ ಪ್ರಣಯ ಪ್ರಸಂಗ” ಕಾರ್ಯಕ್ರಮಗಳು ನಡೆಯಲಿದೆ.
ಈ ಸಮ್ಮೇಳನಕ್ಕೆ ಆರ್ಥಿಕ ನೆರವು ನೀಡುವವರು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಕಾರ್ಕಳ ಮತ್ತು “ಕರ್ನಾಟಕ ಗಮಕ ಕಲಾ ಪರಿಷತ್ತು” ಉಳಿತಾಯ ಖಾತೆ ನಂಬರ್ 4042500101900101 ಈ ಖಾತೆಗೆ ಚೆಕ್ ಅಥವಾ ಡಿಡಿ ನೀಡುವ ಮೂಲಕ ಸಹಕರಿಸಬೇಕಾಗಿ ವಿನಂತಿ ಮಾಡಲಾಗಿದೆ.



















