
ಕಾರ್ಕಳ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಡಾ. ಜಗದೀಶ್ ಪೈ (62) ಅವರು ಜುಲೈ 28ರಂದು ವಿಧಿವಶರಾಗಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠಾವಂತ ಸ್ವಯಂಸೇವಕರಾಗಿದ್ದುಕೊಂಡು ಆರ್ ಎಸ್ಎಸ್ ವಲಯದ ಉನ್ನತ ಮಟ್ಟದ ಸಂಪರ್ಕವನ್ನು ಹೊಂದಿದ್ದ ಡಾ. ಜಗದೀಶ್ ಪೈ ಅವರು ಕನ್ನಡ ಹಾಗೂ ಕೊಂಕಣಿ ಸಾಹಿತಿಯಾಗಿದ್ದರು. ರಾಷ್ಟ್ರೀಯವಾದಿ ಲೇಖನ, ಹಾಸ್ಯ ಲೇಖನ, ವ್ಯಕ್ತಿತ್ವ ವಿಕಸನದ ಕುರಿತು ಹಲವಾರು ಪುಸ್ತಕಗಳನ್ನು ಪ್ರಕಟಿಸಿದ ಇವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು.
ಆತ್ರೇಯಾ ಕ್ಲಿನಿಕ್ ನ ಮಾಲಕ ಡಾ. ಜಗದೀಶ್ ಪೈ ಅವರು ಪತ್ನಿ ಡಾ. ನಂದಾ ಪೈ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.