
ಕಾರ್ಕಳ :ಕರ್ನಾಟಕದ ಅತಿದೊಡ್ಡ ಮಲ್ಟಿ ಟ್ಯಾಲೆಂಟ್ ಟಿವಿ ರಿಯಾಲಿಟಿ ಶೋ “ಕರುನಾಡು ಗಾಟ್ ಟ್ಯಾಲೆಂಟ್ ಸೀಸನ್ 2” ರ ಕಾರ್ಕಳ ಸಿಟಿ ಆಡಿಷನ್‌ಗೆ ಚಾಲನೆ ನೀಡಲಾಗಿದೆ. ಈ ಸೀಸನ್‌ನ ಕಾರ್ಕಳ ಸಿಟಿ ಆಡಿಷನ್‌ನ ಉದ್ಘಾಟನಾ ಸಮಾರಂಭವು ಜುಲೈ 13, 2025 ರಂದು ನಗರದ ಜೇಸೀಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ಸ್ವರಾಜ್ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.
ಈ ಕಾರ್ಯಕ್ರಮವನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ವಿ. ಸುನಿಲ್ ಕುಮಾರ್ ಅವರು ಉದ್ಘಾಟಿಸಿದರು. ಕಾರ್ಕಳದಲ್ಲಿ ಬಹು ಮುಖ ಪ್ರತಿಭೆಗಳು ಇದ್ದು ರಾಷ್ಟ್ರ, ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದಾರೆ, ಹಾಗಾಗಿ ಇದೊಂದು ಒಳ್ಳೆಯ ವೇದಿಕೆ ಎಲ್ಲಾ ಆಡಿಷನ್ ಒಳ್ಳೆಯ ರೀತಿಯಲ್ಲಿ ಆಗಿ ಫೈನಲ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕದ್ರಿ ಈವೆಂಟ್ಸ್, ಮಂಗಳೂರು ಇದರ ಮಾಲೀಕರಾದ ಶl ಜಗದೀಶ್ ಕದ್ರಿ ಅವರು ವಹಿಸಿದ್ದರು.. ರಮಿತಾ ಶೈಲೆಂದ್ರ ಅವರು ಮಕ್ಕಳಲ್ಲಿ ಪ್ರತಿಭೆಯ ಜೊತೆ ರಾಷ್ಟ್ರ ಚಿಂತನೆ ಬೆಳಸಿ ಎಂದು ಹಾರೈಸಿದರು.
ಅಶ್ವಥ್ ಎಸ್ ಮಕ್ಕಳಿಗೆ ವೇದಿಕೆಯ ಸದುಪಯೋಗ ಪೋಷಕರು ಹೇಳಿಕೊಡಬೇಕು, ಅವಕಾಶ ತುಂಬಾ ಇದೆ ಅದನ್ನು ಬಳಸಿ ಕೊಳ್ಳುವ ಕಲೆ ನಮ್ಮದು ಎಂದು ಹಾರೈಸಿದರು.

ವೇದಿಕೆಯಲ್ಲಿ ಸಂದೀಪ್ ಕಾಮತ್, ಸಾವಿತ್ರಿ ಮನೋಹರ್ ,ಅವಿನಾಶ್ ಜಿ ಶೆಟ್ಟಿ ,ಯೋಗೀಶ್ ಸಾಲಿಯಾನ್ ,ವಾಸುದೇವ ಭಟ್ ನೆಕ್ಕರ ಪಲ್ಕೆ ,ಇಕ್ಬಾಲ್ ಅಹಮದ್, ಮೊಹಮ್ಮದ್ ಅಲಿ, ರಮಕಾಂತ್ ಶೆಟ್ಟಿ , ಸಯ್ಯದ್ ಯುನುಸ್ ಕರುನಾಡಿನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಈ ಮಹತ್ವದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿಭಾನ್ವೇಷಣೆ ಪ್ರಕ್ರಿಯೆಯು ಕಾರ್ಕಳದಲ್ಲಿ ಯಶಸ್ವಿಯಾಗಿ ನಡೆಯಿತು.