
ಕರಿಯ ಚಿತ್ರದ ನಿರ್ಮಾಪಕ ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಬಾಲರಾಜ್ (38) ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಜಾಂಡೀಸ್‌ನಿಂದಾಗಿ ಕಳೆದ ತಿಂಗಳು ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳಿದ್ದ ಸಂತೋಷ್ ಮತ್ತೆ ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಪೊಲೋ ಆಸ್ಪತ್ರೆಗೆ ಸೇರಿಸಲಾಗಿದ್ದು ಅವರ ಆರೋಗ್ಯ ಸ್ಥಿತಿ ತೀರ ಗಂಭೀರ ಸ್ಥಿತಿ ತಲುಪಿದೆ.
ಗಣಪ, ಕರಿಯ-2, ಕೆಂಪ, ಬರ್ಕ್ಲೀ ಚಿತ್ರಗಳಲ್ಲಿ ಸಂತೋಷ್ ನಟಿಸಿದ್ದು ಅವರ ಅಭಿನಯದ ಸತ್ಯ ಚಿತ್ರ ಇನ್ನಷ್ಟೇ ರಿಲೀಸ್ ಆಗಬೇಕಿದೆ.