
ಕನ್ನಡ ರಾಜ್ಯೋತ್ಸವದ ಶುಭಾವಸರದಲ್ಲಿ ಕನ್ನಡ ಸಂಸ್ಕೃತಿಯ ಪ್ರಚಾರ ಹಾಗೂ ಓದುಗರಲ್ಲಿ ಪುಸ್ತಕಾಭಿರುಚಿ ಬೆಳೆಸುವ ಉದ್ದೇಶದಿಂದ ಕಾರ್ಕಳ ಹಾಗೂ ಮೂಡುಬಿದಿರೆಯಲ್ಲಿರುವ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವತಿಯಿಂದ ವಿಶೇಷ ರಿಯಾಯಿತಿಯಲ್ಲಿ ಪುಸ್ತಕ ಮಾರಾಟ ಮೇಳ ಆಯೋಜಿಸಲಾಗಿದೆ.
ಈ ಮೇಳದಲ್ಲಿ ಸಾಹಿತ್ಯ, ಕಾದಂಬರಿ, ಪ್ರಬಂಧ, ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ ಸೇರಿದಂತೆ ವಿವಿಧ ವಿಷಯಗಳ ನೂರಾರು ಪುಸ್ತಕಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿರಲಿವೆ. ಕನ್ನಡ ಸಾಹಿತ್ಯ ಕ್ಷೇತ್ರದ ಮಹನೀಯರ ಕೃತಿಗಳ ಜೊತೆಗೆ ಯುವ ಲೇಖಕರ ಹೊಸ ಕೃತಿಗಳು, ಹೊಸ ಪ್ರಕಾಶನಗಳು ಹಾಗೂ ಜನಪ್ರಿಯ ಪುಸ್ತಕಗಳು ಈ ಮೇಳದ ಆಕರ್ಷಣೆಯಾಗಿದೆ. 10% ನಿಂದ 50%ನ ವರೆಗೆ
ರಿಯಾಯಿತಿ ಸಿಗಲಿದೆ.
ಈ ವಿಶೇಷ ಮೇಳವು ದಿನಾಂಕ 01-11-2025 ರಿಂದ 09-11-2025 ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ ಸಮಯ 9.00 ರಿಂದ ಸಂಜೆ ಸಮಯ 9.00ರ ವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಎಲ್ಲಾ ಪುಸ್ತಕ ಪ್ರೇಮಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರಕಾಶಕರು ಕೋರಿದ್ದಾರೆ. ಕನ್ನಡದ ನಾಡು ನುಡಿ ಮತ್ತು ನಂಬಿಕೆಗೆ ಬೆಂಬಲವಾಗಿ ಪುಸ್ತಕ ಓದುವುದನ್ನು ಅಭ್ಯಾಸವನ್ನಾಗಿಸೋಣ ಎಂಬುದು ಈ ಕಾರ್ಯಕ್ರಮದ ಆಶಯ
ಪ್ರಕಟಣೆ: ಕ್ರಿಯೇಟಿವ್ ಪುಸ್ತಕ ಮನೆ, ಕಾರ್ಕಳ
ಸಂಪರ್ಕ: +919606474289



















































