
ಕನ್ನಡ ಬಿಗ್‌ಬಾಸ್ ಸೀಸನ್ 12 ಒಂದಿಲ್ಲೊಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದು ಈಗಾಗಗಲೇ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಇದೀಗ ಶಶಿ ಎಂಬವರು ಎಕ್ಸ್ ಖಾತೆ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ದೂರು ನೀಡಿ ಶೋ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಶಶಿ ಪೋಸ್ಟ್ನ ನಲ್ಲಿ ಉಲ್ಲೇಖವಾಗಿರುವ ಅಂಶ:
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗಮನಿಸಬೇಕು. ಗಿಲ್ಲಿ ನಟರಾಜ್ ಹೆಣ್ಣು ಮಕ್ಕಳನ್ನು ಹಾಸ್ಯಾಸ್ಪದ ರೀತಿಯಲ್ಲಿ, ಕೀಳು double meaning ಹಾಡು ಹೇಳಿ ಚೇಡಿಸುತ್ತಿದ್ದಾರೆ. ಮಹಿಳಾ ಆಯೋಗಕ್ಕೆ ದೂರು ದಾಖಲಿಸಿ, ಪೊಲೀಸ್ ಎಫ್ಐಆರ್ ಮಾಡಿ ಬಿಗ್ ಬಾಸ್ ಶೋ ನಿಲ್ಲಿಸಲು ಹೇಳಿ ಎಂದು ಶಶಿ ತಮ್ಮ ಪೋಸ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದೂರು ನೀಡಲು ಕಾರಣ:
ಲಕ್ಷುರಿ ಫುಡ್‌ಗಾಗಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರಿಗೆ ಬಿಗ್‌ಬಾಸ್ ಮನೆಯಲ್ಲಿರುವ ವಿಲನ್ ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ ಪ್ರಕಾರ, ಇಬ್ಬರು ಜೊತೆಯಾಗಿ ಕಾವ್ಯಾ ಅವರನ್ನು ಅಳಿಸಬೇಕು. ಈ ಟಾಸ್ಕ್‌ಗೆ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಒಪ್ಪಿಕೊಂಡಿದ್ದಾರೆ. ಈ ಪ್ರಕಾರ, ಗಿಲ್ಲಿ ನಟ ಕೊಂಕು ಮಾತುಗಳಿಂದ ಕಾವ್ಯಾ ಕಣ್ಣೀರು ಹಾಕುವಂತೆ ಮಾಡಿದ್ದಾರೆ.





