ಕಾರ್ಕಳ ತಾಲೂಕಿನ ಗಾಂಧಿ ಮೈದಾನದಲ್ಲಿ ಧ್ವಜಾರೋಹಣ, 69ನೇ ಕನ್ನಡ ರಾಜ್ಯೋತ್ಸವ ಆಚರಣೆ

ಕರ್ನಾಟಕವು ಅಖಂಡವಾಗಿ ಉಳಿಯಬೇಕು. ನದಿ ವಿವಾದ, ಗಡಿವಿವಾದಗಳು ಕೇವಲ ಭೌಗೋಳಿಕ ಅಡೆತಡೆಗಳಾಗಿದ್ದು ಕನ್ನಡ ಮನಸುಗಳನ್ನು ವಿಶ್ವವ್ಯಾಪಿಯಾಗಿ ಬೆಳೆಸಬೇಕು. ಅಖಂಡ ಕರ್ನಾಟಕದ ಉಳಿವಿಗಾಗಿ ಕನ್ನಡಿಗರು ಕಂಕಣಬದ್ಧರಾಗೋಣ ಎಂದು ತಹಶಿಲ್ದಾರ್ ಪ್ರತಿಭಾ ಆರ್ ಇಂದು ಕರೆ ನೀಡಿದರು.
ಇಂದು ಕಾರ್ಕಳ ತಾಲೂಕಿನ ಗಾಂಧಿಮೈದಾನದಲ್ಲಿ ಧ್ವಜಾರೋಹಣ ಮಾಡಿದ ದಂಡಾಧಿಕಾರಿಗಳು ಧ್ವಜ ಸಂದೇಶ ನೀಡಿದರು.


ಪೋಲೀಸ್ ಇಲಸಖೆ, ಗೃಹ ದಳ, Scouts and guides, ಶಾಲಾಮಕ್ಕಳು ಶಿಸ್ತಿನ ಪಥ ಸಂಚನಲದ ಮೂಲಕ ದಂಡಾಧಿಕಾರಿಗಳಿಗೆ ಧ್ವಜ ವಂದನೆ ನೀಡಿ ಗೌರವ ರಕ್ಷೆ ತೋರಿದರು.
ದಂಡಾಧಿಕಾರಿಗಳ ಸಂದೇಶದ ಮುಖ್ಯಾಂಶಗಳು
- ಕನ್ನಡವು ಕಲಿಕಾ ಮಾಧ್ಯಮವಾಗಬೇಕು
- ಯುವ ಪೀಳಿಗೆಯಲ್ಲಿ ಓದುವ ಅಭಿರುಚಿ ಹುಟ್ಟಿಸುವಂತಹ ಪ್ರಯತ್ನಗಳಾಗಬೇಕು. ಮೊಬೈಲ್ ಗೀಳಿನಿಂದ ಹೊರತಂದು ಸಾಹಿತ್ಯಾಭಿರುಚಿ ಮೂಡಿಸಬೇಕು.
- ಕನ್ನಡ ವ್ಯಾವಹಾರಿಕ ಭಾಷೆಯಾಗಿ, ನಿತ್ಯದ ಭಾಷೆಯಾಗಿ ಬೆಳೆಯಬೇಕು.
- ಕನ್ನಡವು ವಿಶ್ವದೆಲ್ಲೆಡೆ ಪಸರಿಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.
- ಕನ್ನಡವು ಮೃತ ಭಾಷೆಯಾಗದೆ ಅಮೃತಭಾಷೆಯಾಗಬೇಕು.
- ಕನ್ನಡವು ಕನ್ನಡಿಗರ ಅಸ್ಮಿತೆ, ಕನ್ನಡಿಗರ ಹೆಗ್ಗುರುತು.
- ಕನ್ನಡವು ಮನಸಿನ-ಕನಸಿನ ಭಾಷೆಯಾಗಬೇಕು.
- ಅಖಂಡ ಕರ್ನಾಟಕದ ಏಕತೆಗೆ ಧಕ್ಕೆ ಬಾರದಂತೆ ಮನೆಮನಗಳಲ್ಲಿ ಕನ್ನಡದ ಕಿಚ್ಚನ್ನು ಹತ್ತಿಸಬೇಕು.
ತಹಶಿಲ್ದಾರ್ ರವರ ಸಂದೇಶವು ಅಲ್ಲಿ ನೆರೆದಿದ್ದವರ ಮನಗಳನ್ನು
ಮುಟ್ಟುವಲ್ಲಿ ಯಶಸ್ವಿಯಾಯಿತು.
ಬಹಳ ವರ್ಷಗಳ ನಂತರ ಅತ್ಯುತ್ತಮ ಧ್ವಜ ಸಂದೇಶ ಕೇಳಲು ಸಿಕ್ಕಿದೆ ಎಂದು ಸಭಿಕರು ಅಭಿಪ್ರಾಯಪಟ್ಟರು.
ಅನಂತಶಯನ ಸರ್ಕಲ್ ನಿಂದ ಗಾಂಧಿ ಮೈದಾನದವರೆಗೆ ಮೆರವಣಿಗೆ ಸಾಗಿತು.
ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆ ಪ್ರಾರಂಭಿಸಲಾಯಿತು.
ಅಕರ್ಷಕ ಟ್ಯಾಬ್ಲೋಗಳು ಸಾರ್ವಜನಿಕರಿಗೆ ಮುದ ನೀಡಿದವು.
ಧ್ವಜಾರೋಹಣದ ನಂತರ ಮಂಜುನಾಥ ಪೈ ಹಾಲ್ ನಲ್ಲಿ ಶಾಲಾಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಎಲ್ಲಾ ಕಾರ್ಯಕ್ರಮಗಳ ನೇತೃತ್ವವನ್ನು ಮಾನ್ಯ ತಹಶಿಲ್ದಾರ್ ರವರು ವಹಿಸಿದ್ದರು. ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮ ಮೂಡಿ ಬಂದಿತು.







