
ಬೆಂಗಳೂರು: ಬಿಯರ್ ಉತ್ಪಾದನಾ ಕಂಪನಿಗಳು ರಾಜ್ಯದಲ್ಲಿ ಒಂದು ತಿಂಗಳ ಹಿಂದೆಯಷ್ಟೆ ಬಿಯರ್ ದರ ಏರಿಸಿದ್ದು ಇದೀಗ ಮತ್ತೆ ಕಚ್ಚಾ ವಸ್ತುಗಳ ಬೆಲೆ ಏರಿಕೆ ಕಾರಣ ನೀಡಿ ಮತ್ತೆ ದರ ಏರಿಕೆ ಮಾಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಯರ್ ದರ 50ರಿಂದ 60 ರೂ.ವರೆಗೆ ಏರಿಕೆಯಾಗಿದೆ.
ಈ ಹಿಂದೆ ಸರ್ಕಾರವು ಬಿಯರ್ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಿದ ಬಳಿಕ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಿಯರ್ ಕಂಪನಿಗಳು ಫೆಬ್ರವರಿ ತಿಂಗಳಲ್ಲಿ ಬಿಯರ್ ಬೆಲೆ 10 ರೂ.ವರೆಗೆ ಏರಿಕೆ ಮಾಡಿತ್ತು. ಈಗ ಕಂಪನಿಗಳು ಕಚ್ಚಾ ವಸ್ತುಗಳ ಬೆಲೆ ಏರಿಕೆ ಕಾರಣ ನೀಡಿ ಬಿಯರ್ ದರ ಏರಿಕೆ ಮಾಡಿದ್ದು ಈ ಮೂಲಕ 15 ತಿಂಗಳ ಅಂತರದಲ್ಲಿ ಬಿಯರ್ ಬೆಲೆ ಸುಮಾರು 50 ರಿಂದ 60 ರೂ. ವರೆಗೆ ಹೆಚ್ಚಳವಾದಂತಾಗಿದೆ.











