ನವದೆಹಲಿ: ಗುರುವಾರ ವಿಜ್ಞಾನ ಭವನದಲ್ಲಿ ನಡೆದ 7ನೇ ಅಪೆಕ್ಸ್ ಲೆವೆಲ್ ನಾರ್ಕೋ-ಕೋಆರ್ಡಿನೇಷನ್ ಸೆಂಟರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದು ಗ್ರಾಂ ಡ್ರಗ್ಸ್ ಕೂಡ ದೇಶಕ್ಕೆ ಪ್ರವೇಶಿಸಲು ಬಿಡುವುದಿಲ್ಲ. ಭಾರತವನ್ನು ಮಾದಕವಸ್ತುಗಳಿಂದ ಮುಕ್ತಗೊಳಿಸುವುದಾಗಿ ಪ್ರತಿಜ್ಞೆ ಮಾಡಿದರು.
ಡ್ರಗ್ ಸಿಂಡಿಕೇಟ್‌ಗಳು ಸಮುದ್ರದ ಗಡಿಯ ಮೂಲಕ ಪ್ರವೇಶಿಸಲು ಪ್ರಯತ್ನಿಸುತ್ತಿದ್ದು ಅಧಿಕಾರಿಗಳು ಈ ಡ್ರಗ್ಸ್ ಗಮ್ಯಸ್ಥಾನಗಳ ಬಗ್ಗೆ ಆಕಸ್ಮಿಕವಾಗಿ ನನಗೆ ಹೇಳುತ್ತಿದ್ದರು. ಎಲ್ಲಿಂದಲೇ ಆಗಲಿ ಒಂದೇ ಒಂದು ಗ್ರಾಂ ಡ್ರಗ್ಸ್ ಭಾರತಕ್ಕೆ ಬರಲು ಬಿಡುವುದಿಲ್ಲ ಎಂದು ನಾವು ನಿರ್ಣಯ ಮಾಡಬೇಕು. ಭಾರತದ ಗಡಿಗಳನ್ನು ಯಾವುದೇ ರೀತಿಯಲ್ಲಿ ಮಾದಕವಸ್ತು ವ್ಯಾಪಾರಕ್ಕೆ ಬಳಸಿಕೊಳ್ಳಲು ಅನುಮತಿ ನೀಡಬಾರದು ಎಂದು ಹೇಳಿದ್ದಾರೆ.