
ವಾಷಿಂಗ್ಟನ್: ಭಾರತವು ರಷ್ಯಾದ ತೈಲ ಖರೀದಿಸಬಾರದು ಎಂಬ ಅಮೆರಿಕಾದ ಒತ್ತಡದ ವಿರುದ್ಧ ಪ್ರಸ್ತುತ ದೃಢ ನಿಲುವನ್ನು ಹೊಂದಿದ್ದು, ಆದರೆ ಅಂತಿಮವಾಗಿ ಭಾರತ ವಾಷಿಂಗ್ಟನ್ ಜೊತೆಗೆ ಮಾತುಕತೆಗೆ ಬರಲೇಬೇಕಾಗುತ್ತದೆ ಎಂದು ಅಮೆರಿಕಾದ ವಾಣಿಜ್ಯ ಕಾರ್ಯದರ್ಶಿ ಹೋವಾರ್ಡ್ ಲುಟ್ನಿಕ್ ವ್ಯಂಗ್ಯವಾಡಿದ್ದಾರೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಲುಟ್ನಿಕ್ ಬ್ಲೂಮ್ ಬರ್ಗ್ ಜೊತೆ ಮಾತನಾಡಿ ‘ಒಂದು ಅಥವಾ ಎರಡು ತಿಂಗಳೊಳಗೆ ಭಾರತ ಮರಳಿ ನಮ್ಮ ಬಳಿ ಬಂದು ಕ್ಷಮಿಸಿ ಎಂದು ಹೇಳಲಿದೆ ಎಂದು ನಾನು ಭಾವಿಸುತ್ತೇನೆ. ಅಲ್ಲದೆ ಭಾರತವೇ ಡೊನಾಲ್ಡ್ ಟ್ರಂಪ್ ಜೊತೆ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಲಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ಭಾರತ ಅಮೆರಿಕವನ್ನು ಬೆಂಬಲಿಸದೆ ಹೋದರೆ ಭಾರಿ ತೆರಿಗೆಯನ್ನು ಎದುರಿಸಬೇಕಾಗುತ್ತದೆ. ವ್ಯಾಪಾರ ಒಪ್ಪಂದದಲ್ಲಿ ಭಾರತ ನಮ್ಮೊಂದಿಗೆ ಕೈಜೋಡಿಸದಿದ್ದರೆ ಅಮೆರಿಕಾಗೆ ರಫ್ತು ಮಾಡುವ ಸರಕುಗಳ ಮೇಲೆ 50% ರಷ್ಟು ಸುಂಕ ಪಾವತಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.