ಕೋಲ್ಕತಾ-ಹೈದರಾಬಾದ್ ನಡುವೆ ಇಂದು 17 ನೇ ಐಪಿಎಲ್ ಫೈನಲ್

ಚೆನ್ನೈ: ಸನ್ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿದುದ್ಧದ ಐಪಿಎಲ್-2024ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಉಭಯ ತಂಡಗಳ ಪ್ರಶಸ್ತಿ ಕಾಳಗಕ್ಕೆ ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ.ಮೇ 21 ಮಂಗಳವಾರ ನಡೆದಿದ್ದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ ತಂಡ ಹೈದರಾಬಾದ್ ವಿರುದ್ಧ 8 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು. ಲೀಗ್ ಹಂತದ ಪಂದ್ಯದಲ್ಲಿಯೂ ಕೆಕೆಆರ್ ಮೇಲುಗೈ ಸಾಧಿಸಿತ್ತು. ಇದೀಗ ಈ ಎಲ್ಲ ಸೋಲಿಗೆ ಕಮಿನ್ಸ್ ಪಡೆ ಫೈನಲ್ನಲ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.ಪಿಚ್ ರಿಪೋರ್ಟ್ಚೆನ್ನೈಯ ಎಂ.ಎ.ಚಿದಂಬರಂ ಮೈದಾನ ಪಿಚ್ ನಿಧಾನಗತಿಯಿಂದ ಕೂಡಿದೆ. ಸ್ಪಿನ್ ಸ್ನೇಹಿಯಾಗಿದ್ದರೂ ಕೂಡ ಈ ಮೈದಾನ ಹೈ ಸ್ಕೋರಿಂಗ್ ಪಂದ್ಯ ಕೂಡ ಕಂಡುಬಂದಿದೆ.
ಚೆನ್ನೈ ಮತ್ತು ಲಕ್ನೋ ನಡುವಣ ಪಂದ್ಯದಲ್ಲಿ ಚೆನ್ನೈ 210 ರನ್ ಬಾರಿಸಿತ್ತು. ಈ ಬೃಹತ್ ಮೊತ್ತವನ್ನು ಲಕ್ನೋ ತಂಡ 19.3 ಓವನ್‌ನಲ್ಲೇ ಗುರಿ ತಲುಪಿತ್ತು. ಹೀಗಾಗಿ ಪಿಚ್ ವರ್ತನೆಯನ್ನು ಸ್ಪಷ್ಟವಾಗಿ ಹೇಳುವುದು ಕೊಂಚ ಕಷ್ಟವಾಗಿದೆ. ಮಂಜಿನ ಕಾಟ ಇರುವ ಕಾರಣ ಟಾಸ್ ಗೆಲ್ಲುವ ತಂಡ ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು.ಮುಖಾಮುಖಿಕೆಕೆಆರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ 27 ಪಂದ್ಯಗಳನ್ನು ಆಡಿದೆ. ಈ ಪೈಕಿ 18 ಪಂದ್ಯಗಳಲ್ಲಿ ಕೆಕೆಆರ್ ಗೆಲುವು ಸಾಧಿಸಿದೆ. ಹೈದರಾಬಾದ್ ಕೇವಲ 9 ಪಂದ್ಯ ಮಾತ್ರ ಗೆದ್ದಿದೆ. ಈ ಆವೃತ್ತಿಯಲ್ಲಿಯೂ ಆಡಿದ ಲೀಗ್ ಮತ್ತು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹೈದರಾಬಾದ್ ಸೋಲು ಕಂಡಿತ್ತು. ಈ ಲೆಕ್ಕಾಚಾರವನ್ನು ನೋಡುವಾಗ ಇಂದಿನ ಪಂದ್ಯದಲ್ಲಿಯೂ ಕೆಕೆಆರ್ ಗೆಲುವಿನ ಫೇವರಿಟ್ ತಂಡವಾಗಿದೆ.
ಫೈನಲ್ನಲ್ಲಿ ಇತ್ತಂಡಗಳು ಪರಸ್ಪರ ಎದುರಾಗುತ್ತಿರುವುದು ಇದೇ ಮೊದಲು. ರೀಮಲ್ ಚಂಡಮಾರುತ; ಫೈನಲ್ ಪಂದ್ಯಕ್ಕೆ ಮಳೆ ಭೀತಿ ಇದೆಯೇ?ಆಸ್ಟ್ರೇಲಿಯಾದ ನಾಯಕನಾಗಿರುವ ಪ್ಯಾಟ್ ಕಮಿನ್ಸ್ 2 ವಿಶ್ವಕಪ್ ಗೆದ್ದ ನಾಯಕ. ಅದು ಕೂಡ ಚೊಚ್ಚಲ ಪ್ರಯತ್ನದಲ್ಲೇ ಈ ಸಾಧನೆ ಮಾಡಿದ್ದಾರೆ. ಟೆಸ್ಟ್ ಮತ್ತು ಏಕದಿನ ವಿಶ್ವಕಪ್ನಲ್ಲಿ ಅವರು ಟ್ರೋಫಿ ಗೆದ್ದಿದ್ದಾರೆ. ಹೀಗಾಗಿ ಇವರು ಹೈದರಾಬಾದ್ಗೂ ತಮ್ಮ ನಾಯಕತ್ವದಲ್ಲಿ ಕಪ್ ಗೆಲ್ಲಬಹುದು ಎನ್ನುವುದು ಕ್ರಿಕೆಟ್ ಅಭಿಮಾನಿಗಳ ನಂಬಿಕೆ. ಮೊತ್ತೊಂದೆಡೆ ಆಸ್ಟ್ರೇಲಿಯಾ ಟೆಸ್ಟ್ ಮತ್ತು ಏಕದಿನ ವಿಶ್ವಕಪ್ ಫೈನಲ್ನಲ್ಲಿ ಗೆಲುವಿನ ಹೀರೊ ಎನಿಸಿಕೊಂಡಿದ್ದ ಟ್ರಾವಿಸ್ ಹೆಡ್ ಕೂಡ ಹೈದರಾಬಾದ್ ತಂಡದಲ್ಲಿದ್ದಾರೆ. ಹೀಗಾಗಿ ಫೈನಲ್ನಲ್ಲಿಯೂ ಇವರ ಸ್ಫೋಟಕ ಬ್ಯಾಟಿಂಗ್ ನಿರೀಕ್ಷೆ ಮಾಡಲಾಗಿದೆ.ಕೆಕೆಆರ್ ಪಾಲಿನ ದೊಡ್ಡ ಬಲವೆಂದರೆ ಆಟಗಾರರ ಸಂಘಟಿತ ಪ್ರದರ್ಶನ. ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲಿ ಸಮರ್ಥವಾಗಿದೆ. ಸೀಮಿತ ಆಗಾರರ ಪ್ರದರ್ಶನದ ಮೇಲೆ ತಂಡ ನೆಚ್ಚಿಕೊಂಡಿಲ್ಲ. ಇಂಗ್ಲೆಂಡ್ನ ಫಿಲ್ ಸಾಲ್ಟ್ ಪಾಕ್ ವಿರುದ್ಧದ ಟಿ20 ಸರಣಿಯ ಭಾಗವಾಗಿ ತವರಿಗೆ ಮರಳಿದ್ದರೂ ಕೂಡ ಇವರ ಸ್ಥಾನದಲ್ಲಿ ಕಳೆದ ಪಂದ್ಯದಲ್ಲಿ ಆಡಲಿಳಿದಿದ್ದ ಅಫಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಯಶಸ್ಸು ಕಂಡಿದ್ದರು. ಆ್ಯಂಡ್ರೆ ರೆಸಲ್ ಈ ಬಾರಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.