
ನವದೆಹಲಿ: ಮಂಗಳವಾರ ಕೇಂದ್ರ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು ಅದೇನೆಂದರೆ ಏಳು ವರ್ಷ ತುಂಬಿದ ಬಳಿಕ ಆಧಾರ್ ಅಪ್ಡೇಟ್ಗಾಗಿ ಬಯೋಮೆಟ್ರಿಕ್ ನವೀಕರಣ ಮಾಡಿಸದಿದ್ದರೆ ಆಧಾರ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಈ ಕುರಿತು ಆಧಾರ್ ಸಂಸ್ಥೆ ಕಡ್ಡಾಯ ಬಯೋಮೆಟ್ರಿಕ್ ನವೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೊಬೈಲ್ ಗಳಿಗೆ ಸಂದೇಶಗಳನ್ನು ಕಳುಹಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು 5 ವರ್ಷಕ್ಕಿಂತ ಚಿಕ್ಕ ಮಕ್ಕಳ ಆಧಾರ್ ನೋಂದಣಿಗೆ ಛಾಯಾಚಿತ್ರ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ವಿಳಾಸದಂತಹ ವಿವರಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ. ಬೆರಳಚ್ಚು ಮತ್ತು ಐರಿಸ್ ಗುರುತನ್ನು ತೆಗೆದುಕೊಂಡಿರುವುದಿಲ್ಲ. ಸೂಕ್ತ ಸಮಯದಲ್ಲಿ ಆಧಾರ್ ಕಾರ್ಡ್ ಎಂಬಿಯು ನವೀಕರಣ ಮಾಡಿಕೊಳ್ಳುವ ಮೂಲಕ ಮಕ್ಕಳಿಗೆ ಸಂಬಂಧಿಸಿದ ಅಧೀಕೃತ ಅಂಕಿ-ಅಂಶ ದಾಖಲಾತಿಗೆ ಸಹಾಯಕವಾಗಲಿದೆ ಎಂದು ಯುಐಡಿಎಐ ತಿಳಿಸಿದೆ.
MBU ಎಂದರೆ:
ಐದು ವರ್ಷದೊಳಗಿನ ಮಕ್ಕಳ ಆಧಾರ್ ಮಾಡಿಸುವ ಸಂದರ್ಭದಲ್ಲಿ ಕೇವಲ ಫೋಟೋಗ್ರಾಫ್ ಮಾತ್ರ ಬಳಸಲಾಗುತ್ತಿದೆ. ಜೊತೆಗೆ ಮಕ್ಕಳ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ವಿಳಾಸವನ್ನು ನಮೂದಿಸಲಾಗುತ್ತಿತ್ತು. ಐದು ವರ್ಷದೊಳಗಿನ ಮಕ್ಕಳ ಕಣ್ಣು ಮತ್ತು ಬೆರಳಚ್ಚು ಈ ಹಂತದಲ್ಲಿ ಆಧಾರ್ ನಲ್ಲಿ ದಾಖಲಿಸಲಾಗುತ್ತಿರಲಿಲ್ಲ.
ಹೀಗಾಗಿ 5 ವರ್ಷಕ್ಕೆ ಕಾಲಿಟ್ಟ ಮಕ್ಕಳ ಬೆರಳಚ್ಚು, ಕಣ್ಣು ಹಾಗೂ ಹೊಸ ಫೋಟೋಗ್ರಾಫ್ ಕಡ್ಡಾಯವಾಗಿ ಆಧಾರ್ ಡಾಟಾ ಬೇಸ್ ನಲ್ಲಿ ಅಪ್ಡೇಟ್ ಮಾಡಿಕೊಳ್ಳಬೇಕು ಎಂದು ವರದಿಯಲ್ಲಿ ಉಲ್ಲೇಖಿಸಿದೆ.



















































