Home Blog ಏರ್ ಆಂಬುಲೆನ್ಸ್ ಪತನ: ಏಳು ಮಂದಿ ಸಾವು

ಏರ್ ಆಂಬುಲೆನ್ಸ್ ಪತನ: ಏಳು ಮಂದಿ ಸಾವು

0

ರಾಂಚಿ-ದೆಹಲಿ ಏರ್ ಆಂಬುಲೆನ್ಸ್ ಜಾರ್ಖಂಡ್ ನ ಛತ್ರ ಜಿಲ್ಲೆಯ ಸಿಮಾರಿಯಾ ಎಂಬಲ್ಲಿ ಸೋಮವಾರ ಸಂಜೆ ಅಪಘಾತಕೀಡಾಗಿದ್ದು ಏರ್ ಆಂಬುಲೆನ್ಸ್ ನಲ್ಲಿದ್ದ ಏಳು ಮಂದಿ ಮೃತಪಟ್ಟಿದ್ದಾರೆ .

ವಿಮಾನ ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ರೆಡ್ ಬರ್ಡ್ ಏರ್ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದ್ದ ಬೀಚ್ ಕ್ರಾಫ್ಟ್ ಸಿ90 ವಿಮಾನ ರಾಂಚಿಯಿಂದ ರಾತ್ರಿ 7.11ಕ್ಕೆ ಹೊರಟಿದ್ದು ಏಳು ಮೂವತ್ತರ ವೇಳೆಗೆ ಸಂಪರ್ಕ ಕಳೆದುಕೊಂಡಿತ್ತು. ಇದೀಗ ವಿಮಾನ ಅಪಘಾತಕ್ಕೀಡಾಗಿದ್ದು ವಿಮಾನದಲ್ಲಿದ್ದ ಏಳು ಮಂದಿ ಕೂಡ ಸಾವನ್ನಪ್ಪಿದ್ದಾರೆ. ಪ್ರತಿಕೂಲ ಹವಾಮಾನ ದುರಂತಕ್ಕೆ ಕಾರಣವಾಗಿರಬಹುದು. ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here