
ಶಾಲಾ ಶಿಕ್ಷಣ ಇಲಾಖೆ ಕಾರ್ಕಳ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ ಹಾಗೂ ಬಾಲಕಿಯರ ಕುಸ್ತಿ ಪಂದ್ಯಾಟ ಕ್ರೈಸ್ತ್ ಕಿಂಗ್ ವಿದ್ಯಾ ಸಂಸ್ಥೆಯ ಆತಿಥ್ಯದಲ್ಲಿ ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
40 ಕೆಜಿ ಯಲ್ಲಿ ಹತ್ತನೇ ತರಗತಿಯ ವಿಜಯ ಪ್ರಥಮ ಸ್ಥಾನ, 43 ಕೆಜಿ ಯಲ್ಲಿ 10ನೇ ತರಗತಿಯ ಕು.ಕಸ್ತೂರಿ ಪ್ರಥಮ ಸ್ಥಾನ, 46 ಕೆಜಿ ಯಲ್ಲಿ 10ನೇ ತರಗತಿಯ ಕು.ಸೌಮ್ಯ ಪ್ರಥಮ ಸ್ಥಾನ, 65 ಕೆಜಿ ಯಲ್ಲಿ 10ನೇ ತರಗತಿಯ ಕು.ವಾಣಿ ಪ್ರಥಮ ಸ್ಥಾನ,
14 ವರ್ಷವಯೋಮಾನದ ಸ್ಪರ್ಧೆಯಲ್ಲಿ 33 ಕೆಜಿ ವಿಭಾಗದಲ್ಲಿ 8ನೇ ತರಗತಿಯ ಕು. ಚೈತ್ರ ಪ್ರಥಮ ಸ್ಥಾನ, 30 ಕೆಜಿ ಯಲ್ಲಿ 8ನೇ ತರಗತಿಯ ಉಮಾದೇವಿ, 36 ಕೆಜಿ ಯಲ್ಲಿ 8ನೇ ತರಗತಿಯ ಶ್ವೇತಾ, 46 ಕೆಜಿ ಯಲ್ಲಿ 8ನೇ ತರಗತಿಯ ರಂಜಿತಾ, 49 ಕೆಜಿ ಯಲ್ಲಿ 9ನೇ ತರಗತಿಯ ನಿರಂಜನ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.
ಅಂತೆಯೇ 58 ಕೆಜಿ ವಿಭಾಗದಲ್ಲಿ 8ನೇ ತರಗತಿಯ ಸಮೀಕ್ಷಾ, 53 ಕೆಜಿ ಯಲ್ಲಿ 10ನೇ ತರಗತಿಯ ಕು.ಪೂಜಾ, 57 ಕೆಜಿ ಯಲ್ಲಿ 9ನೇ ತರಗತಿಯ ಕು.ಧನ್ಯಶ್ರೀ , 49 ಕೆಜಿ ಯಲ್ಲಿ 10ನೇ ತರಗತಿಯ ಚೈತ್ರ , 30 ಕೆಜಿ ಯಲ್ಲಿ 8ನೇ ತರಗತಿಯ ನಿತಿನ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಸಾಧನೆಗೈದ ಕುಸ್ತಿ ಪಟುಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರಾದ ನೇಮಿರಾಜ ಶೆಟ್ಟಿ ಕೆ, ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್,
ದೈಹಿಕ ಶಿಕ್ಷಣ ಶಿಕ್ಷಕಿ ಪ್ರಿಯಾ ಪ್ರಭು, ತರಬೇತುದಾರರಾದ ಪ್ರಭಾವತಿ ಹೆಗ್ಡೆ, ತೀರ್ಪುಗಾರರಾದ ಅಕ್ಷತ್ ಹಾಗೂ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿರುತ್ತಾರೆ.