10 ವಿದ್ಯಾರ್ಥಿಗಳಿಗೆ 620ಕ್ಕಿಂತ ಹೆಚ್ಚು ಅಂಕ,42 ವಿದ್ಯಾರ್ಥಿಗಳಿಗೆ 600 ಕ್ಕಿಂತ ಅಧಿಕ ಅಂಕ

ಗಣಿತನಗರ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ
ಮಂಡಳಿ ನಡೆಸಿದ 2025ರ ಸಾಲಿನ 10ನೇ ತರಗತಿಯ ಪರೀಕ್ಷೆ-1ರ ಮರುಮೌಲ್ಯಮಾಪನ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ 10 ವಿದ್ಯಾರ್ಥಿಗಳು 625ರಲ್ಲಿ 620 ಮತ್ತು ಅಧಿಕ ಅಂಕಪಡೆದು ಸಾಧನೆ ಮಾಡಿರುತ್ತಾರೆ. ಈಗಾಗಲೇ ಸ್ವಸ್ತಿ ಕಾಮತ್ 625/625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದರು.
ಮರುಮೌಲ್ಯಮಾಪನದ ಮೂಲಕ ಲಿಖಿತ್ ಡಿ ಶೆಟ್ಟಿ (623) ಮತ್ತು ಸಾಚಿ ಸುಜಯ್ ಕುಮಾರ್ ಶೆಟ್ಟಿ (623) ಅಂಕಗಳನ್ನು ಪಡೆದು ರಾಜ್ಯಕ್ಕೆ ತೃತೀಯ ಸ್ಥಾನಿಗಳಾಗಿರುತ್ತಾರೆ. ಮಿಷಲ್ ಅಸದಿ (621), ಪ್ರಾಪ್ತಿ (621), ಶೇನ್ ಲೂಯಿ ಸ್ಟೀಫನ್ (621), ವೇದಿಕಾ (620), ಎ ಅಮಿತ್ ಕಿಣಿ (620), ಅನ್ವಿತಾ ಎ ಶೆಟ್ಟಿ (620) ಹಾಗೂ ಧನ್ವಿ ಕೆ. ಉಡುಪ (620) ಅಂಕಗಳನ್ನು ಪಡೆದು ರಾಜ್ಯದ ಟಾಪ್ 6ರಲ್ಲಿ ಗುರುತಿಸಿಕೊಂಡಿದ್ದಾರೆ.
ಸಂಸ್ಥೆಯ 107 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 42
ವಿದ್ಯಾರ್ಥಿಗಳು 625ರಲ್ಲಿ 600ಕ್ಕಿಂತ ಅಧಿಕ ಅಂಕವನ್ನು, 76
ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿಯೂ, ಶೇಕಡಾ 95ಕ್ಕಿಂತ
ಅಧಿಕ ಅಂಕವನ್ನು 46 ವಿದ್ಯಾರ್ಥಿಗಳು, 66 ವಿದ್ಯಾರ್ಥಿಗಳು ಶೇಕಡಾ 90ಕ್ಕಿಂತ ಅಧಿಕ ಅಂಕವನ್ನು ಹಾಗೂ 99 ಉತ್ತರ ಪತ್ರಿಕೆಗಳು 100ಕ್ಕೆ 100 ಅಂಕದೊಂದಿಗೆ ದಾಖಲೆಯ ಫಲಿತಾಂಶವನ್ನು ಸಂಸ್ಥೆಯು ಪಡೆದಿರುತ್ತದೆ.






















































