
ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿಯ ವಿದ್ಯಾರ್ಥಿನಿ ಕುಮಾರಿ ಅನ್ವಿತಾ ರಾಜೇಶ್ 620 ಅಂಕಗಳನ್ನು(99.20 ಶೇಕಡಾ ) ಪಡೆಯುವುದರೊಂದಿಗೆ ರಾಜ್ಯದಲ್ಲಿ 6ನೇ ರ‌್ಯಾಂಕನ್ನು ಪಡೆದಿರುತ್ತಾಳೆ.
2024-25ನೇ ಸಾಲಿನಲ್ಲಿ 122 ವಿದ್ಯಾರ್ಥಿಗಳು ಹಾಜರಾಗಿದ್ದು 27 ಮಂದಿ ಡಿಸ್ಟಿಂಕ್ಷನ್ ನಲ್ಲಿಯೂ 63 ಮಂದಿ ಪ್ರಥಮ ಶ್ರೇಣಿಯಲ್ಲಿಯೂ, 14 ಮಂದಿ ದ್ವಿತೀಯ ಶ್ರೇಣಿಯಲ್ಲಿಯೂ 05 ಮಂದಿ ಪಾಸ್ ಕ್ಲಾಸಿನಲ್ಲೂ ತೇರ್ಗಡೆ ಹೊಂದುವುದರೊಂದಿಗೆ ಶಾಲೆಗೆ 90% ಫಲಿತಾಂಶ ಪಡೆದಿದೆ.ಹಾಗೂ ಗುಣಮಟ್ಟದಲ್ಲಿ ಎ ಗ್ರೇಡ್ ಪಡೆದುಕೊಂಡಿರುತ್ತದೆ.ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು ,ಶಾಲಾ ಮುಖ್ಯ ಶಿಕ್ಷಕರು ಅಧ್ಯಾಪಕವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.