
ಬೆಂಗಳೂರು: ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯು ದಿನಾಂಕ 21-03-2025ರಿಂದ 04-04-2025 ರವರೆಗೆ ನಡೆಯಲಿದ್ದು ಈ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಾವುದೇ ಆತಂಕ ಮತ್ತು ಭಯವಿಲ್ಲದೆ ಆತ್ಮಸ್ಥೈರ್ಯದಿಂದ ಎದುರಿಸಬೇಕು ಎಂಬ ಉದ್ದೇಶದಿಂದ ಮಾರ್ಚ್ 15 ರಂದು ವಿಶೇಷ ಯೂಟ್ಯೂಬ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿ ಪರೀಕ್ಷೆಯನ್ನು ಅತ್ಯಂತ ಲವಲವಿಕೆಯಿಂದ ಎದುರಿಸಲು NIMHANS ನುರಿತ ಮನೋವೈದ್ಯರು ಅಗತ್ಯವಿರುವ ಮಾರ್ಗದರ್ಶನವನ್ನು ನೀಡಲಿದ್ದು ಮಾರ್ಚ್ 15 ರಂದು ಸಂಜೆ 4:00 ಯಿಂದ 5ರವರೆಗೆ “Live YouTube podcast” ಕಾರ್ಯಕ್ರಮವನ್ನು ಮಂಡಳಿ ವತಿಯಿಂದ ಆಯೋಜಿಸಲಾಗಿದೆ.