27.7 C
Udupi
Thursday, July 31, 2025
spot_img
spot_img
HomeBlogಎಳ್ಳಾರೆ:ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ರಕ್ತದಾನ ಶಿಬಿರರಕ್ತದಾನವು ಅತ್ಯಂತ ಪುಣ್ಯದ ಕಾರ್ಯ: ಕ್ಯಾಪ್ಟನ್ ಗಣೇಶ್...

ಎಳ್ಳಾರೆ:ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ರಕ್ತದಾನ ಶಿಬಿರರಕ್ತದಾನವು ಅತ್ಯಂತ ಪುಣ್ಯದ ಕಾರ್ಯ: ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಕಾರ್ಕಳ:ರಕ್ತದಾನವು ನಾವು ಮಾಡುವಂತಹ ಅತ್ಯಂತ ಪುಣ್ಯದ ಕಾರ್ಯ.ನಾವು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಆರೋಗ್ಯವಂತ ರಾಗಿರಬಹುದು ಎಂದು ವಿಧಾನಪರಿಷತ್ ನ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.ಅವರು ಎಳ್ಳಾರೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಐಎಎಸ್ ಅಧಿಕಾರಿ ಸದಾಶಿವ ಪ್ರಭು ಎಳ್ಳಾರೆ,ಮಂಗಳೂರು ವಿಭಾಗ ಗ್ರಾಮವಿಕಾಸ ಟೋಳಿ ಸದಸ್ಯೆ ರಮಿತಾ ಶೈಲೇಂದ್ರ,ಕಡ್ತಲ ಗ್ರಾ.ಪಂ ಅಧ್ಯಕ್ಷ ಸುಕೇಶ್ ಹೆಗ್ಡೆ,ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್,ವೈದ್ಯ ಡಾ|ಪ್ರಮೋದ್ ಕುಮಾರ್ ಹೆಗ್ಡೆ,ಲಯನ್ಸ್ ಕ್ಲಬ್ ಮುನಿಯಾಲಿನ ಅಧ್ಯಕ್ಷ ಸಂದೇಶ್ ಶೆಟ್ಟಿ,ಶ್ರೀ ಜನಾರ್ದನ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಶೆಟ್ಟಿ ಮುಂಡಾರು,ಉದ್ಯಮಿ ದಿನೇಶ್ ಕಿಣಿ,ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆಯ ಸಂಸ್ಥಾಪಕರಾದ ದೇವೇಂದ್ರ ಕಾಮತ್,ಅಧ್ಯಕ್ಷೆ ಶಾಂತಿ ಪ್ರಭು ಉಪಸ್ಥಿತರಿದ್ದರು.

ಶಾಂತಿ ಪ್ರಭು ಸ್ವಾಗತಿಸಿ ಹರೀಶ್ ಶೆಟ್ಟಿ ಧನ್ಯವಾದವಿತ್ತರು.ದೀಪಕ್ ಕಾಮತ್ ಎಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.ರಕ್ತದಾನ ಶಿಬಿರದಲ್ಲಿ 104 ಜನರು ರಕ್ತದಾನವನ್ನು ಮಾಡಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page