
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರವು ಅದೆಷ್ಟೋ ಪ್ರತಿಭೆಗಳಿಗೆ ಉಚಿತ ಶಿಕ್ಷಣ, ಉದ್ಯೋಗಾವಕಾಶಗಳನ್ನು ಯಾವುದೇ ಫಲಾಪೇ ಕ್ಷೆಗಳಿಲ್ಲದೆ ಸದ್ದಿಲ್ಲದೆ ಮಾಡುತ್ತಿದೆ. ಅದಕ್ಕೊಂದು ಉದಾಹರಣೆ ಎಂದರೆ ಮುಂಬರುವ ಅಂತರಾಷ್ಟ್ರೀಯ ಮಟ್ಟದ ದಕ್ಷಿಣ ಏಷ್ಯಾ ಕ್ರೀಡಾ ಸಮ್ಮಿಲನದಲ್ಲಿ ರವಿಶಂಕರ ಶಾಲೆಯ ದೈಹಿಕ ಶಿಕ್ಷಕಿಯಾದ ಶ್ರೀಮತಿ ವಿದ್ಯಾ ಯು. ಶೆಟ್ಟಿಯವರು ಭಾಗವಹಿಸುತ್ತಿರುವುದು. ಇವರು ಬಹಳಷ್ಟುಜಿಲ್ಲಾ,ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಕ್ರೀಡೋ ತ್ಸವದಲ್ಲಿ ಭಾಗವಹಿಸಿದ ಕ್ರೀಡಾಪಟುವಾಗಿದ್ದು,2017ರಲ್ಲಿ ರಾಷ್ಟ್ರಮಟ್ಟದ ಶಾರ್ಟ್ ಪುಟ್ ನಲ್ಲಿ ಬೆಳ್ಳಿಯ ಪದಕ ಪಡೆದಿರುವುದಲ್ಲದೆ ಜಾವಲಿನ್ ನಲ್ಲಿ , ಡಿಸ್ಕಸ್ ತ್ರೋನಲ್ಲಿ ಭಾಗವಹಿಸಿರುತ್ತಾರೆ.
2017ರಲ್ಲಿ ಸಿಂಗಾಪುರ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಶಾರ್ಟ್ ಪುಟ್, ಜಾವೆಲಿನ್, ಡಿಸ್ಕಸ್ ತ್ರೋನಲ್ಲಿ ಕ್ರಮವಾಗಿ ಮೂರು ಚಿನ್ನದ ಪದಕಗಳನ್ನು ಪಡೆದುದಲ್ಲದೆ ಈ ಕ್ರೀಡಾಕೂಟದಲ್ಲಿ ಚಾಂಪಿಯನ್ ಶಿಪ್ ಪಡೆದಿರುವುದು ಗಮನಾರ್ಹ. ಇವರಿಗೆ ಯಾವುದೇ ತರಬೇತುದಾರರಿಲ್ಲದೆ ತಮ್ಮ ಸ್ವಂತ ಪರಿಶ್ರಮದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೆಯನ್ನು ಮಾಡಿದ ಇವರಿಗೆ ಹಿತೈಷಿಗಳು ಹಾಗೂ ಕುಟುಂಬರಷ್ಟೇ ಸ್ಪೂರ್ತಿ ಹಾಗೂ ಪ್ರೇರಣೆ. ಇಂತಹ ಸ್ವ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯುತ ನಾಗರಿಕರ ಹೊಣೆ. ಅಂತಹ ಜವಾಬ್ದಾರಿಯನ್ನು ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ ಮಾಡಿರುವುದು ಸ್ವಾಗತಾರ್ಹ ಹಾಗೂ ಸ್ಪೂರ್ತಿದಾಯಕ. ಶ್ರೀಮತಿ ವಿದ್ಯಾ ಶೆಟ್ಟಿಯವರು ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು, ಮತ್ತಷ್ಟು ಸಾಧನೆಗಳನ್ನು ಮಾಡಲಿ ಎಂದು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಾಲ್ ಕಾಮತ್ , ಶಾಲಾ ಆಡಳಿತ ಮಂಡಳಿಯ ಸದಸ್ಯರು ,ಶಿಕ್ಷಕಿಯರು ಶುಭ ಹಾರೈಸಿರುತ್ತಾರೆ.