23.5 C
Udupi
Wednesday, March 4, 2026
spot_img
spot_img
HomeBlogಎರಡು ವರ್ಷಗಳಲ್ಲಿ ಮೂರನೇ ಬಾರಿ ಮದ್ಯದ ದರ ಏರಿಕೆ ಮಾಡಿದ ರಾಜ್ಯ ಸರ್ಕಾರ: ಒಂದು ಕ್ವಾರ್ಟರ್‌ಗೆ...

ಎರಡು ವರ್ಷಗಳಲ್ಲಿ ಮೂರನೇ ಬಾರಿ ಮದ್ಯದ ದರ ಏರಿಕೆ ಮಾಡಿದ ರಾಜ್ಯ ಸರ್ಕಾರ: ಒಂದು ಕ್ವಾರ್ಟರ್‌ಗೆ ₹25 ರೂ. ಬೆಲೆ ಏರಿಕೆ

ಬೆಂಗಳೂರು : ಅಬಕಾರಿ ಇಲಾಖೆ ಇಂದಿನಿಂದಲೇ ನೂತನ ದರಗಳನ್ನು ಜಾರಿಗೆ ತರುವ ಮೂಲಕ, ಒಂದು ಕ್ವಾರ್ಟರ್ ಮೇಲೆ ಸರಾಸರಿ ₹10 ರಿಂದ ₹25 ದರ ಹೆಚ್ಚಳವಾಗಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಎರಡು ವರ್ಷದಲ್ಲಿ ಮದ್ಯ ಪ್ರಿಯರಿಗೆ ಈಗಾಗಲೇ 3ನೇ ಬಾರಿ ದರ ಏರಿಕೆಯ ಹೊಡೆತ ಬಿದ್ದಿದೆ.

ಸರ್ಕಾರವು ಈ ಹಿಂದೆಯೇ ಎರಡು ಬಾರಿ ಐಎಂಎಲ್ ಮದ್ಯದ ದರಗಳನ್ನು ಹೆಚ್ಚಿಸಿದ್ದು ಈಗ 2024-25ನೇ ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಗಾಗಿ ನಿಗದಿಪಡಿಸಿರುವ ₹40,000 ಕೋಟಿ ಟಾರ್ಗೆಟ್ ತಲುಪಿಸಲು ಮತ್ತೊಂದು ಬಾರಿ ದರ ಏರಿಕೆಯ ಮಾರ್ಗವನ್ನು ಆರಿಸಿದೆ. ಹೊಸ ದರ ಏರಿಕೆ ಇಂದಿನಿಂದಲೇ ಅನ್ವಯವಾಗಲಿದೆ.

ನೂತನ ದರ ಏರಿಕೆಯ ವಿವರಗಳು:
ಅಬಕಾರಿ ಇಲಾಖೆ ಈ ಬಾರಿ 16 ಸ್ಲ್ಯಾಬ್‌ಗಳ ಪೈಕಿ ಪ್ರಾಥಮಿಕ 4 ಸ್ಲ್ಯಾಬ್‌ಗಳ ಮೇಲೆ ದರ ಹೆಚ್ಚಳ ಜಾರಿಗೆ ತಂದಿದೆ:
ಸ್ಯ್ಲಾಬ್ 1:
ಹಳೆಯ ದರ: ₹65 → ನೂತನ ದರ: ₹80 (₹15 ಏರಿಕೆ)
ಸ್ಯ್ಲಾಬ್ 2:
ಹಳೆಯ ದರ: ₹80 → ನೂತನ ದರ: ₹95 (₹15 ಏರಿಕೆ)
ಸ್ಯ್ಲಾಬ್ 3:
ಹಳೆಯ ದರ: ₹120 → ನೂತನ ದರ: ₹130-₹135 (₹10-₹15 ಏರಿಕೆ)
ಸ್ಯ್ಲಾಬ್ 4:
ಹಳೆಯ ದರ: ₹130 → ನೂತನ ದರ: ₹140-₹145 (₹10-₹15 ಏರಿಕೆ)

ಒಂದು ಕ್ವಾರ್ಟರ್ ಮೇಲೆ ಸರಾಸರಿ ₹10 ರಿಂದ ₹25, ಒಂದು ಫುಲ್ ಬಾಟಲ್ ಮೇಲೆ ₹50 ರಿಂದ ₹100 ದರ ಏರಿಕೆಯಾಗಲಿದ್ದು ಈ ದರಗಳು ಎಂಆರ್‌ಪಿ (MRP) ದರಗಳಾಗಿದ್ದು, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿನ ಮೌಲ್ಯ ವಸೂಲಾಗುವ ಸಾಧ್ಯತೆ ಇದೆ. ಮದ್ಯದ ದರ ಏರಿಕೆಯಿಂದ ಸಾಮಾನ್ಯ ಗ್ರಾಹಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page